ದೇಶ

ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕಾದ 7ನೇ ಅಧ್ಯಕ್ಷ ಟ್ರಂಪ್

Manjula VN

ನವದೆಹಲಿ: ಭಾರತ ಪ್ರವಾಸ ಕೈಗೊಳ್ಳುತ್ತಿರುವ 7ನೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿದ್ದಾರೆ. 

1959ರ ಡಿ.9ರಿಂದ 14ರವರೆಗೆ ಅಂದಿನ ಅಧ್ಯಕ್ಷ ಡ್ವೈಟ್ ಡಿ. ಐಸೆನ್ ಹೋವರ್ ಅವರು ಆಗಮಿಸುವ ಮೂಲಕ ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಇತಿಹಾಸ ಸೃಷ್ಟಿಸಿದ್ದರು. 

ರಾಮಲೀಲಾ ಮೈದಾನ ಹಾಗೂ ಸಂಸತ್ತಿನ ಉಭಯ ಸದನಗಳಲ್ಲೂ ಐಸೆನ್ ಹೋವರ್ ಭಾಷಣ ಮಾಡಿದ್ದರು. ನಂತರ 1969ರ ಜು.3ರಂದು ರಿಚರ್ಡ್ ನಿಕ್ಸನ್, 1978ರ ಜ.1ರಂದು ಜಿಮ್ಮಿ ಕಾರ್ಟರ್, 2000ನೇ ಇಸವಿಯ ಮಾ.19ರಂದು ಬಿಲ್ ಕ್ಲಿಂಟನ್, 2006 ಮಾ.1ರಂದು ಜಾರ್ಜ್ ಡಬ್ಲ್ಯು ಬುಷ್, 2010 ನ.6 ಹಾಗೂ 2015ರ ಜ.24ರಂದು ಒಬಾಮಾ ಅವರು ಭೇಡಿ ನೀಡಿದ್ದರು. 

ಅಮೆರಿಕಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ. ಸೋಮವಾರ ಅವರು ನಮ್ಮ ಜೊತೆಗಿರುತ್ತಾರೆ ಎಂಬುದು ನಮಗೆ ಗೌರವದ ವಿಚಾರ ಎಂದು ಹೇಳಿದ್ದಾರೆ. 

SCROLL FOR NEXT