ಸಂಗ್ರಹ ಚಿತ್ರ 
ದೇಶ

ಕೇವಲ 5 ರೂಪಾಯಿಗಾಗಿ ಆಟೋ ಡ್ರೈವರ್ ಭೀಕರ ಕೊಲೆ!

ಪಶ್ಚಿಮ ಉಪನಗರ ಬೊರಿವಾಲಿಯ ಗ್ಯಾಸ್ ಸ್ಟೇಷನ್ ನೌಕರರು ಕೇವಲ 5 ರುಪಾಯಿಗಾಗಿ ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದು ಪರಿಣಾಮ 68 ವರ್ಷದ ಆಟೋ ಡ್ರೈವರ್ ಮೃತಪಟ್ಟಿದ್ದಾರೆ.

ಮುಂಬೈ: ಪಶ್ಚಿಮ ಉಪನಗರ ಬೊರಿವಾಲಿಯ ಗ್ಯಾಸ್ ಸ್ಟೇಷನ್ ನೌಕರರು ಕೇವಲ 5 ರುಪಾಯಿಗಾಗಿ ಆಟೋ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದು ಪರಿಣಾಮ 68 ವರ್ಷದ ಆಟೋ ಡ್ರೈವರ್ ಮೃತಪಟ್ಟಿದ್ದಾರೆ.

ತಮ್ಮ ಆಟೋದ ಗ್ಯಾಸ್ ತುಂಬಿಸಿಕೊಳ್ಳಲು ರಾಮ್ದುಲ್ಲಾ ಸರ್ಜು ಯಾದವ್ ಅವರು ಸಿಎನ್ ಡಿ ಸ್ಟೇಷನ್ ಗೆ ಹೋಗಿದ್ದಾರೆ. ಈ ವೇಳೆ 205 ರುಪಾಯಿಗೆ ಗ್ಯಾಸ್ ತುಂಬಿಸಿಕೊಂಡು 500 ರುಪಾಯಿ ನೀಡಿದ್ದಾರೆ. 

ಈ ವೇಳೆ ಚಿಲ್ಲರೆ ಕೊಡದೆ ಗ್ಯಾಸ್ ಸ್ಟೇಷನ್ ಸಿಬ್ಬಂದಿ ಹೆಚ್ಚುವರಿಯಾಗಿ 5 ರುಪಾಯಿ ನೀಡಿ ಉಳಿದ ಚಿಲ್ಲರೆಯನ್ನು ನೀಡುವುದಾಗಿ ಹೇಳಿದ್ದಾರೆ. ಈ ವೇಳೆ ಚಿಲ್ಲರೆ ಇಲ್ಲದೆ ರಾಮ್ದುಲ್ಲಾ ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಿಕಿ ನಡೆದಿದೆ. 

ಕೋಪಗೊಂಡ ಸಿಬ್ಬಂದಿ ರಾಮ್ದುಲ್ಲಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಲ್ದುಲ್ಲಾರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಸಂಬಂಧ ಐವರು ಗ್ಯಾಸ್ ಸ್ಟೇಷನ್ ಸಿಬ್ಬಂದಿಯನ್ನು ಅವರ ವಿರುದ್ಧ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೂರೈಕೆ ಭಯ ಹೆಚ್ಚುತ್ತಿರುವುದಕ್ಕೆ ಗಲ್ಫ್‌ನ ಇಂಧನ ಕೇಂದ್ರಗಳ ಮೇಲೆ ದಾಳಿ; ಭಾರತ ಕಳವಳ!

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

North Korea Election: ಇತಿಹಾಸದಲ್ಲೇ ಮೊದಲು; Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ

KD Movie: Nora Fatehi ವಿರುದ್ಧ ಮುಸ್ಲಿಂ ಬೋರ್ಡ್ ಫತ್ವಾ ಜಾರಿ..!

Dramatic footage: ಸುದ್ದಿಗಾರನ ಹಿಂದೆಯೇ ಬಿದ್ದ ಇಸ್ರೇಲ್ ಕ್ಷಿಪಣಿ; ಸ್ವಲ್ಪದರಲ್ಲೇ ಪಾರು!

SCROLL FOR NEXT