ದೇಶ

ಸರೊಗಸಿ ನಿಯಂತ್ರಣ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

Raghavendra Adiga

ನವದೆಹಲಿ: ರಾಜ್ಯಸಭೆ  ಆಯ್ಕೆ ಸಮಿತಿಯ ಶಿಫಾರಸುಗಳನ್ನು ಸೇರಿಸಿದ ನಂತರ ಬಾಡಿಗೆ ತಾಯ್ತನ- ಸರೊಗಸಿ (ನಿಯಂತ್ರಣ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

"ರಾಜ್ಯಸಭೆಯ ಆಯ್ಕೆ ಸಮಿತಿಯ ಶಿಫಾರಸುಗಳನ್ನು ಒಳಗೊಂಡ ಸರೊಗಸಿ ನಿಯಂತ್ರಣ ಮಸೂದೆಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ" ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಸದೀಯ ಸಮಿತಿಯು ನಿಕಟ ಸಂಬಂಧಿಗಳು ಂಆತ್ರವಲ್ಲದೆ  "ಸಿದ್ಧರಿರುವ" ಯಾವುದೇ ಮಹಿಳೆಗೆ ಬಾಡಿಗೆ ತಾಯಿಯಾಗಿ ಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿತ್ತು.

ಸರೊಗಸಿ (ನಿಯಂತ್ರಣ) ಮಸೂದೆ, 2019 ಕ್ಕೆ ರಾಜ್ಯಸಭೆಯ 23 ಸದಸ್ಯರ ಆಯ್ಕೆ ಸಮಿತಿಯು ಸೂಚಿಸಿದ 15 ಪ್ರಮುಖ ಬದಲಾವಣೆಗಳನ್ನು ಸೇರಿಸಿದೆ.ಜತೆಗೆ  "ಬಂಜೆತನ" ದ ವ್ಯಾಖ್ಯಾನವನ್ನು ಅಳಿಸಿಹಾಕಿದ್ದು ಐದು ವರ್ಷಗಳ ಅಸುರಕ್ಷಿತ ಸಂಭೋಗದ ನಂತರ ಗರ್ಭಧರಿಸಲು ಅಸಮರ್ಥ ಎಂಬ ಪದಗುಚ್ಚಗಳನ್ನು ಕೈಬಿಟ್ಟಿದೆ, ದಂಪತಿಗಳು ಒಂದು ಮಗುವಿಗಾಗಿ ಕಾಯುವ ಈ ಅವಧಿ ಅತ್ಯಂತ ಸುದೀರ್ಘವಾದದ್ದೆಂದು ಸಮಿತಿ ಭಾವಿಸಿದೆ.

SCROLL FOR NEXT