ದೇಶ

ಆರ್ಥಿಕ ಹಿಂಜರಿತ: 2020 ನೇ ಆರ್ಥಿಕ ವರ್ಷದಲ್ಲಿ 1.6 ಮಿಲಿಯನ್ ಗಿಂತ ಕಡಿಮೆ ಉದ್ಯೋಗ ಸೃಷ್ಟಿ! 

Srinivas Rao BV

ಆರ್ಥಿಕ ಹಿಂಜರಿತ ಉದ್ಯೋಗ ಸೃಷ್ಟಿಯ ಮೇಲೂ ಪರಿಣಾಮ ಬೀರುತ್ತಿದ್ದು, 2020 ನೇ ಆರ್ಥಿಕ ವರ್ಷದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಕಡಿಮೆಯಾಗಲಿದೆ. 

ಎಸ್ ಬಿಐ ರಿಸರ್ಚ್ ಪ್ರಕಾರ 2020ನೇ ಆರ್ಥಿಕ ವರ್ಷದಲ್ಲಿ 1.6 ಮಿಲಿಯನ್ ಗಿಂತಲೂ ಕಡಿಮೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಕಳೆದ ವರ್ಷ 2019 ರಲ್ಲಿ 8.97 ಮಿಲಿಯನ್ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. 

ಇಪಿಎಫ್ಒ ಡೇಟಾ ಮೂಲಕ ಈ ಮಾಹಿತಿ ಲಭ್ಯವಾಗಿದ್ದು, ತಿಂಗಳಿಗೆ 15,000 ಸಾವಿರ ಹಾಗೂ ಮೇಲ್ಪಟ್ಟ ವೇತನ ನೀಡುವ ಉದ್ಯೋಗಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.

ಕೇಂದ್ರ, ರಾಜ್ಯ ಸರ್ಕಾರಿ, ಖಾಸಗಿ ಉದ್ಯೋಗಗಳು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ವ್ಯಾಪ್ತಿಯಲ್ಲಿ ಬರುತ್ತವೆ. ಎನ್ ಪಿಎಸ್ ವ್ಯಾಪ್ತಿಗೆ ಸೇರುವ ಉದ್ಯೋಗ ಸೃಷ್ಟಿಯೂ ಈ ವರ್ಷ 39,000 ಕ್ಕಿಂತಲೂ ಕಡಿಮೆಯಾಗಿರಲಿವೆ ಎಂದು ಎಸ್ ಬಿಐ ರಿಸರ್ಚ್ ಹೇಳಿದೆ.  

SCROLL FOR NEXT