ದೇಶ

ದೆಹಲಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ನಿಂದ 54 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Raghavendra Adiga

ನವದೆಹಲಿ: ಫೆಬ್ರವರಿ 8 ರ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆ ಮಾಡಿತು.

ಕಾಂಗ್ರೆಸ್ ಸೇರಿದ್ದ ಮಾಜಿ ಎಎಪಿ ಮುಖಂಡ ಅಲ್ಕಾ ಲಂಬಾ ಅವರಿಗೆ ಚಾಂದನಿ ಚೌಕ್ ಕ್ಷೇತ್ರದಿಂದ ಟಿಕೆಟ್ ನೀಡಿದ್ದು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೀರ್ತಿ ಆಜಾದ್ ಅವರ ಪತ್ನಿ ಪೂನಮ್ ಆಜಾದ್ ಸಂಗಮ್ ವಿಹಾರದಿಂದ ಸ್ಪರ್ಧಿಸಲಿದ್ದಾರೆ.

ದೆಹಲಿಯ ಮಾಜಿ ಸಚಿವ ಅಶೋಕ್ ಕುಮಾರ್ ವಾಲಿಯಾ ಕೃಷ್ಣನಗರ ಕ್ಷೇತ್ರದಿಂದ, ಬಲ್ಲಿಮಾರನ್ ನಿಂದ ಹರೂನ್ ಯೂಸುಫ್, ಸೀಲಾಂಪುರದ ಮಾತೀನ್ ಅಹಮದ್ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ಹೇಳಿದೆ.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ನವದೆಹಲಿ ಸ್ಥಾನದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ

ಪಾಟ್ಪರ್ಗಂಜ್ ನಿಂದ ಡಿಸಿಎಂಮನೀಶ್ ಸಿಸೋಡಿಯಾ ವಿರುದ್ಧ ಪಕ್ಷವು ಲಕ್ಷ್ಮಣ ರಾವತ್ ಅವರನ್ನು ಕಣಕ್ಕಿಳಿಸಿದೆ.

SCROLL FOR NEXT