ದೇಶ

ದೇವೀಂದರ್ ಸಿಂಗ್ ಮನೆ ಮೇಲೆ ಎನ್ಐಎ ದಾಳಿ

Manjula VN

ಶ್ರೀನಗರ: ಭಯೋತ್ಪಾದನೆ ಚಟುವಟಿಕೆಗಳಲ್ಲಿ ಮಾಜಿ ಪೊಲೀಸ್ ಅಧಿಕಾರಿ ದೇವೀಂದರ್ ಸಿಂಗ್ ಪಾತ್ರದ ಬಗ್ಗೆ ತನಿಖೆ ಮುಂದುವರೆದಿದ್ದು, ಈ ನಡುವಲ್ಲೇ ದೇವೀಂದರ್ ಸಿಂಗ್ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ. 

ಉಗ್ರರೊಂದಿಗೆ ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದ ಸಂದರ್ಭದಲ್ಲಿ ದೇವೀಂದರ್ ಸಿಂಗ್ ಅವರು ಸಿಕ್ಕಿಬಿದ್ದಿದ್ದರು. ದೇವೀಂದರ್ ಸಿಂಗ್ ಬಂಧನದ ಬಳಿಕ ಇದೀಗ ಶ್ರೀನಗರದ ಇಂದಿರಾನಗರದಲ್ಲಿರುವ ಅವರ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ. 

ದೇವೀಂದರ್ ಸಿಂಗ್ ಅವರು ಉಗ್ರರೊಂದಿಗಿ ಸಿಕ್ಕಿಬಿದ್ದ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯು ಸಿಂಗ್ ಅವರನ್ನು ವಜಾಗೊಳಿಸಿತ್ತು. ಬಳಿಕ 2018ರಲ್ಲಿ ನೀಡಲಾಗಿದ್ದ ಶೌರ್ಯ ಪ್ರಶಸ್ತಿಯನ್ನು ಹಿಂಪಡೆದುಕೊಂಡಿತ್ತು. 

ಇದೀಗ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ತಂಡ ಪರಿಶೀಲನೆ ನಡೆಸುತ್ತಿದೆ. ದಾಳಿ ಬಳಿಕ ಕೆಲ ಅಧಿಕಾರಿಗಳು ರಾಜಧಾನಿ ದೆಹಲಿಗೆ ಹಿಂತಿರುಗಿದ್ದು, ಐವರು ಸದಸ್ಯರ ಅಧಿಕಾರಿಗಳ ತಂಡ ಇನ್ನೂ ಅಲ್ಲಿಯೇ ಉಳಿದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. 

SCROLL FOR NEXT