ಸಂಗ್ರಹ ಚಿತ್ರ 
ದೇಶ

ಟಿವಿ ಆನ್ ಮಾಡಿ ಎಂದಿದ್ದಕ್ಕೆ 8 ವರ್ಷದ ಬಾಲಕಿ ಕೊಂದು, ಮೃತದೇಹ ಡ್ರಮ್'ಗೆ ಎಸೆದ ಪಾಪಿ!

ಟಿವಿ ಆನ್ ಮಾಡಿ ಎಂದಿದ್ದಕ್ಕೆ ಕೆಂಡಾಮಂಡಲಗೊಂಡ ನೆರೆಮನೆಯಾತ 8 ವರ್ಷದ ಬಾಲಕಿಯೋರ್ವಳನ್ನು ಕತ್ತು ಹಿಸುಕಿ ಕೊಂದು ನೀರಿನ ಡ್ರಮ್ ನಲ್ಲಿ ಹಾಕಿರುವ ಘಟನೆಯೊಂದು ತಮಿಳುನಾಡಿನ ಟ್ಯುಟಿಕೋರಿನ್ ಜಿಲ್ಲೆಯಲ್ಲಿ ನಡೆದಿದೆ. 

ಚೆನ್ನೈ: ಟಿವಿ ಆನ್ ಮಾಡಿ ಎಂದಿದ್ದಕ್ಕೆ ಕೆಂಡಾಮಂಡಲಗೊಂಡ ನೆರೆಮನೆಯಾತ 8 ವರ್ಷದ ಬಾಲಕಿಯೋರ್ವಳನ್ನು ಕತ್ತು ಹಿಸುಕಿ ಕೊಂದು ನೀರಿನ ಡ್ರಮ್ ನಲ್ಲಿ ಹಾಕಿರುವ ಘಟನೆಯೊಂದು ತಮಿಳುನಾಡಿನ ಟ್ಯುಟಿಕೋರಿನ್ ಜಿಲ್ಲೆಯಲ್ಲಿ ನಡೆದಿದೆ. 

3ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿ ನಿನ್ನೆ ನೆರೆಮನೆಯ ಮನೆಗೆ ಹೋಗಿದ್ದಾಳೆ. ಈ ವೇಳೆ ಟಿವಿ ಆನ್ ಮಾಡುವಂತೆ ಕೇಳಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಯುವಕ ತಂದೆಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದು, ತಂದೆಯ ಮೇಲಿದ್ದ ಕೋಪವನ್ನು ಟಿವಿ ಆನ್ ಮಾಡಲು ತಿಳಿಸಿದ ಬಾಲಕಿ ಮೇಲೆ ಬಿಟ್ಟಿದ್ದಾನೆ. 

ತಂದೆ ಮೇಲೆ ಕೋಪಗೊಂಡಿದ್ದ ಯುವಕ ಬಾಲಕಿಯ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಮನೆಯಲ್ಲಿದ್ದ ಪ್ಲಾಸ್ಟಿಕ್ ಡ್ರಮ್'ಗೆ ಬಾಲಕಿಯ ಮೃತದೇಹ ಹಾಕಿ ಮುಚ್ಚಳ ಮುಚ್ಚಿದ್ದಾನೆ. ಗಂಟೆಗಳ ಬಳಿಕ ಮೃತದೇಹವನ್ನು ತೆಗೆದುಕೊಂಡು ಹೋಗಿ ಸೇತುವೆ ಬಳಿಯಲ್ಲಿದ್ದ ಮೋರಿಗೆ ಎಸೆದಿದ್ದಾನೆ. 

ಈ ವೇಳೆ ಸ್ಥಳದಲ್ಲಿದ್ದ ಜನರು ಇದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿ ಹಾಗೂ ಮೃತದೇಹವನ್ನು ಸಾಗಿಸಲು ಸಹಾಯ ಮಾಡಿದ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

ಬಾಲಕಿ ತಾಯಿ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಟ್ಯುಟಿಕೋರಿನ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ತಾಯಿ ಕೆಲಸಕ್ಕೆ ಹೋದ ಕೂಡಲೇ ಬಾಲಕಿ ನೆರೆಮನೆಗೆ ತೆರಳಿ ಪ್ರತಿನಿತ್ಯ ಟಿವಿ ನೋಡುತ್ತಿದ್ದಳು ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!