ದೇಶ

ಲೇಹ್ ಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್: ಯೋಧರ ಕಸರತ್ತು ವೀಕ್ಷಣೆ

Sumana Upadhyaya

ಲೇಹ್(ಲಡಾಕ್): ಭಾರತ-ಚೀನಾ ಗಡಿ ವಿವಾದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸಿದ್ದಾರೆ.

ಇಂದು ಬೆಳಗ್ಗೆ ಅವರು ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನಾರವಾನೆ ಜೊತೆಗೆ ಲೇಹ್ ನ ಸ್ಟಕ್ನ ಫಾರ್ವರ್ಡ್ ಪ್ರದೇಶದಕ್ಕೆ ಆಗಮಿಸಿ ಭಾರತೀಯ ಸೇನಾಪಡೆ ಯೋಧರ ಪಾರಾ ಡ್ರಾಪಿಂಗ್ ಕೌಶಲ್ಯಗಳನ್ನು ವೀಕ್ಷಿಸಿದರು.

ಭಾರತ ಮತ್ತು ಚೀನಾ ಗಡಿ ಮಧ್ಯೆ ಪೂರ್ವ ಲಡಾಕ್ ನಲ್ಲಿ ಮುಂದುವರಿದಿರುವ ಸಮಸ್ಯೆ ಮಧ್ಯೆ ಸವಿಸ್ತಾರವಾಗಿ ಅಲ್ಲಿನ ಭದ್ರತೆ, ಸುರಕ್ಷತಾ ಕ್ರಮಗಳ ಬಗ್ಗೆ ರಾಜನಾಥ್ ಸಿಂಗ್ ಅವರು ಚರ್ಚೆ ನಡೆಸುತ್ತಿದ್ದಾರೆ.

ಜುಲೈ ಆರಂಭದಲ್ಲಿಯೇ ರಾಜನಾಥ್ ಸಿಂಗ್ ಲಡಾಕ್ ಗೆ ಭೇಟಿ ನೀಡುವವರಿದ್ದರು. ಆದರೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಕಳೆದ ಜುಲೈ 3ರಂದು ಪ್ರಧಾನಿ ಮೋದಿ ಇಲ್ಲಿಗೆ ಆಗಮಿಸಿ ಭದ್ರತೆ, ಸುರಕ್ಷತೆ ಬಗ್ಗೆ ಪರಾಮರ್ಶೆ ನಡೆಸಿ ಯೋಧರನ್ನು ಮಾತನಾಡಿಸಿ ಅವರಲ್ಲಿ ಧೈರ್ಯ ತುಂಬಿಸಿದ್ದರು. ಅಲ್ಲದೆ ಕಳೆದ ಬಾರಿಯ ಗಡಿ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯೋಧರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದ್ದರು.

ಇಂದು ಲೇಹ್, ಲಡಾಕ್ ಗೆ ಭೇಟಿ ಕೊಟ್ಟ ನಂತರ ಸಚಿವ ರಾಜನಾಥ್ ಸಿಂಗ್ ನಾಳೆ ಜಮ್ಮು-ಕಾಶ್ಮೀರಕ್ಕೆ ತೆರಳಲಿದ್ದಾರೆ.

SCROLL FOR NEXT