ಗಡಿಯಲ್ಲಿ ಚೀನಾ ತಂಟೆ: ಕ್ಷಿಪ್ರ ರಾಫೆಲ್ ನಿಯೋಜನೆ ಬಗ್ಗೆ ಐಎಎಫ್ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆ
ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ನವದೆಹಲಿ: ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಜು.22 ರಿಂದ 2 ದಿನಗಳು ನಡೆಯಲಿರುವ ಈ ಸಭೆಯಲ್ಲಿ ಕಮಾಂಡರ್ಸ್ ಕಾನ್ಫರೆನ್ಸ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಹಲವು ವಿಷಯಗಳು ಚರ್ಚೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ತಮ್ಮ 7 ಕಮಾಂಡರ್-ಇನ್-ಚೀಫ್ ಗಳೊಂದಿಗೆ ಚೀನಾ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ತಿಂಗಳಾಂತ್ಯಕ್ಕೆ ಬರಲಿರುವ ರಾಫೆಲ್ ಜೆಟ್ ಗಳ ನಿಯೋಜನೆಯ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಈಗಾಗಲೇ ಅಡ್ವಾನ್ಸ್ಡ್ ಹಾಗೂ ಫಾರ್ವರ್ಡ್ ಬೇಸ್ ಗಳಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿರುವ ಮಿರಾಜ್ 2000, ಸುಖೋಯ್-30, ಮಿಗ್-29 ಫೈಟರ್ ಗಳನ್ನು ಭಾರತೀಯ ಸೇನೆ ನಿಯೋಜನೆ ಮಾಡಿದೆ. ಚೀನಾ ಗಡಿ ಭಾಗದಲ್ಲಿರುವ ಫಾರ್ವರ್ಡ್ ಬೇಸ್ ಗಳಲ್ಲಿ ಅತ್ಯಾಧುನಿಕ ಅಪಾಚೆ ಅಟಾಕ್ ಹೆಲಿಕಾಫ್ಟರ್ ಗಳನ್ನೂ ಸಹ ನಿಯೋಜನೆ ಮಾಡಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.