ದೇಶ

ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಸುಪ್ರೀಂ ಕೋರ್ಟ್ ಅಂಗಳದಲ್ಲಿ ಚೆಂಡು!

Vishwanath S

ನವದೆಹಲಿ: ರಾಜಸ್ತಾನದಲ್ಲಿ ರಾಜಕೀಯ ಅತಂತ್ರ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಮತ್ತು ಇತರ 18 ಕಾಂಗ್ರೆಸ್ ಶಾಸಕರ ಅನರ್ಹತೆ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಹೈಕೋರ್ಟ್ ನಿರ್ದೇಶನ ನೀಡಿರುವುದನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. 

ರಾಜಸ್ತಾನ ಹೈಕೋರ್ಟ್ ನಿರ್ದೇಶನ ಶಾಸಕಾಂಗದ ಅಧಿಕಾರಕ್ಕೆ ಮಾಡಿದ ನೇರ ಅವಮಾನ ಎಂದು ಸ್ಪೀಕರ್ ತಮ್ಮ ಅರ್ಜಿಯಲ್ಲಿ ಹೇಳಲಾಗಿದೆ. ಪಕ್ಷಾಂತರ ನಿಷೇದ ಪ್ರಕಾರ ಕ್ರಮಕೈಗೊಳ್ಳುವುದನ್ನು ತಡೆಯುವಂತೆ ಹೈಕೋರ್ಟ್ ನೀಡಿದ ಆದೇಶವು ತಪ್ಪು. ಸಾಂವಿಧಾನಿಕ ಕೆಲಸಕ್ಕೆ ಯಾರು ಅಡ್ಡಿ ಮಾಡದಂತೆ ಸುಪ್ರೀಂ ಕೋರ್ಟ್ ನೋಡಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. 

ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ವಿವೇಕ್ ತಂಕಾ ಅವರು ಸ್ಪೀಕರ್ ಸಿಪಿ ಜೋಶಿ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು ತುರ್ತು ವಿಚಾರಣೆ ನಡೆಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಅವರ ಪೀಠವನ್ನು ಸಿಬಲ್ ವಿನಂತಿಸಿದ್ದಾರೆ. 

SCROLL FOR NEXT