ವಿಜಯ್ ಮಲ್ಯ 
ದೇಶ

ವಿಜಯ್ ಮಲ್ಯ ಹಸ್ತಾಂತರದ ನಿಖರ ಸಮಯ ಹೇಳಲು ಸಾಧ್ಯವಿಲ್ಲ: ಯುಕೆ ರಾಯಭಾರಿ

ದೇಶಭ್ರಷ್ಟರಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು  ಯುಕೆ ಸರ್ಕಾರವು ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲ, ಆದರೆ ಅಪರಾಧಿಗಳು ರಾಷ್ಟ್ರದ ಗಡಿ ದಾಟಿ ಹೋಗುವ ಮೂಲಕ ಶಿಕ್ಷೆಯಿಂದ ತಪ್ಪಿಸಿಕೊಳ್ಲಲು ಸಹ ಸಾಧ್ಯವಾಗುವುದಿಲ್ಲ ಎಂದು  ಬ್ರಿಟಿಷ್ ಹೈಕಮಿಷನರ್ ಸರ್ ಫಿಲಿಪ್ ಬಾರ್ಟನ್ ಗುರುವಾರ ಹೇಳಿದ್ದಾರೆ.

ನವದೆಹಲಿ: ದೇಶಭ್ರಷ್ಟರಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು  ಯುಕೆ ಸರ್ಕಾರವು ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲ, ಆದರೆ ಅಪರಾಧಿಗಳು ರಾಷ್ಟ್ರದ ಗಡಿ ದಾಟಿ ಹೋಗುವ ಮೂಲಕ ಶಿಕ್ಷೆಯಿಂದ ತಪ್ಪಿಸಿಕೊಳ್ಲಲು ಸಹ ಸಾಧ್ಯವಾಗುವುದಿಲ್ಲ ಎಂದು  ಬ್ರಿಟಿಷ್ ಹೈಕಮಿಷನರ್ ಸರ್ ಫಿಲಿಪ್ ಬಾರ್ಟನ್ ಗುರುವಾರ ಹೇಳಿದ್ದಾರೆ.

 ಆನ್‌ಲೈನ್ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಾರ್ಟನ್ ಅವರಿಗೆ ಮಲ್ಯ ಯುಕೆ ಯಲ್ಲಿ ಆಶ್ರಯ ಕೋರಿದ್ದಾರೆಯೆ? ಎಂದು ಪ್ರಶ್ನಿಸಲಾಗಿ ಅವರು ತನ್ನ ಸರ್ಕಾರವು ಅಂತಹ ವಿಷಯಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

"ಯುಕೆ ಸರ್ಕಾರ ಮತ್ತು ಸರ್ಕಾರದಿಂದ ಸ್ವತಂತ್ರವಾಗಿರುವ ನ್ಯಾಯಾಲಯಗಳು, ಜನರು ಬೇರೆ ದೇಶಕ್ಕೆ ಹೋಗುವುದರ ಮೂಲಕ ಶಿಕ್ಷೆಯಿಂದ ತಪ್ಪಿಸಿಕೊಳ್ಲುವುದನ್ನು ತಡೆಯುವಲ್ಲಿ ತಮ್ಮ ಪಾತ್ರದ ಬಗ್ಗೆ ಸಂಪೂರ್ಣವಾಗಿ ಸ್ಪಷ್ಟ ನಿಲುವನ್ನು ಹೊಂದಿದೆ. . ಯಾವುದೇ ಸಂದರ್ಭದಲ್ಲಿ ನಮ್ಮ ಪಾತ್ರವನ್ನು ವಹಿಸಲು ನಾವೆಲ್ಲರೂ ದೃಢನಿಶ್ಚಯವನ್ನು ಹೊಂದಿದ್ದೇವೆ ರಾಷ್ಟ್ರದ  ಗಡಿಗಳನ್ನು ದಾಟುವ ಮೂಲಕ ಅಪರಾಧಿಗಳು ಶಿಕ್ಷೆಯಿಂದ  ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ" ಅವರು ಹೇಳಿದ್ದಾರೆ.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ನಡೆಯುತ್ತಿರುವ ಕಾನೂನು ಪ್ರಕರಣದಲ್ಲಿ ಯುಕೆ ಯಾವ ಹೊಸ ಬದಲಾವಣೆ ಹೊಂದಿಲ್ಲ ಎಂದು ಅವರು ಹೇಳಿದರು."ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವುದಕ್ಕಾಗಿ ನಡೆಯುತ್ತಿರುವ ಕಾನೂನು ಪ್ರಕರಣದ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸಮಯದ ಮಿತಿಯ ಬಗ್ಗೆ  ನಾನು ಏನನ್ನೂ ಹೇಳಲಾರೆ" ಎಂದು ಬಾರ್ಟರ್ ಹೇಳಿದ್ದಾರೆ.  ಅದೇ ಸಮಯದಲ್ಲಿ, ಹೊಸದಾಗಿ ನೇಮಕಗೊಂಡ ರಾಯಭಾರಿ ಯುಕೆ ಸರ್ಕಾರವು ಈ ಪ್ರಕರಣಕ್ಕೆ ಭಾರತವು ನೀಡುವ ಪ್ರಾಮುಖ್ಯತೆಯನ್ನು ಅರಿತಿದೆ ಎಂದೂ ನುಡಿದರು.

ಮಲ್ಯ ಅವರ ಆಶ್ರಯದ ಮನವಿಯನ್ನು ಯಾವ ಕಾರಣಕ್ಕೂ ಪರಿಗಣಿಸಬಾರದೆಂದು ಯುಕೆ ಸರ್ಕಾರಕ್ಕೆ ಬಾರತ ಒತ್ತಾಯಿಸಿದೆ. ಏಕೆಂದರೆ ದೇಶದಲ್ಲಿ ಅವರಿಗೆ ಕಿರುಕುಳ ನೀಡಲಾಗುತ್ತದೆ ಎನ್ನಲು ಯಾವುದೇ ಆಧಾರವಿಲ್ಲ ಎಂದು ಭಾರತ ತಿಳಿಸಿದೆ.ಮಲ್ಯ ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿಲ್ಲ ಎಂದು ಯುಕೆ ಸರ್ಕಾರ ಈ ಹಿಂದೆ ಸೂಚಿಸಿತ್ತು, ಅವರನ್ನು ಹಸ್ತಾಂತರಿಸುವ ಮೊದಲು ಕಾನೂನು ಸಮಸ್ಯೆ ಬಗೆಹರಿಯಬೇಕಿದೆ ಎಂದು ಅದು ಹೇಳಿತ್ತು.

ಮನಿ ಲ್ಯಾಂಡರಿಂಗ್  ಮತ್ತು ವಂಚನೆ ಆರೋಪಗಳನ್ನು ಎದುರಿಸಲು ಭಾರತಕ್ಕೆ ಹಸ್ತಾಂತರವಾಗುವುದನ್ನು ವಿರೋಧಿಸಿ ಮೇ ತಿಂಗಳಲ್ಲಿ ಮಲ್ಯ ಯುಕೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ವಜಾ ಆಗಿದೆ. ಈ ತೀರ್ಪು ಮಲ್ಯ ಪಾಲಿಗೆ ತೀವ್ರ ಹಿನ್ನೆಡೆಯಾಗಿದೆ,  ಮಲ್ಯ 2016 ರ ಮಾರ್ಚ್‌ನಿಂದ ಯುಕೆ ನಲ್ಲಿ ಇದ್ದಾರೆ. ಮೂರು ವರ್ಷಗಳ ಹಿಂದೆ ಸ್ಕಾಟ್‌ಲ್ಯಾಂಡ್ ಯಾರ್ಡ್‌ನಿಂದ ಏಪ್ರಿಲ್ 18, 2017 ರಂದು ಬಂಧಿಸಲ್ಪಟ್ಟ ಮಲ್ಯ ಹಸ್ತಾಂತರ ವಾರಂಟ್‌ನಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

SCROLL FOR NEXT