ದೇಶ

ಜೆಸ್ಸಿಕಾ ಲಾಲ್ ಕೊಲೆ ಆರೋಪಿ ಮನು ಶರ್ಮಾ ಜೈಲಿನಿಂದ ರಿಲೀಸ್!

Raghavendra Adiga

ನವದೆಹಲಿ:  ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದ ಅಪರಾಧಿ, ಜೀವಾವಧಿ ಶಿಕ್ಷೆಗೆ ತುತ್ತಾಗಿರುವ ಮನು ಶರ್ಮಾ ರನ್ನು ಶಿಕ್ಷೆ ಅವಧಿಗೂ ಮುನ್ನ  ಬಿಡುಗಡೆ ಮಾಡಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅನುಮೋದನೆ ನೀಡಿದ್ದಾರೆ.

ದೆಹಲಿ ಸರ್ಕಾರದ ಅಧೀನದಲ್ಲಿರುವ ದೆಹಲಿ ಸೆಂಟೆನ್ಸ್ ರಿವ್ಯೂ ಮಂಡಳಿಯು ಕಳೆದ ತಿಂಗಳು ಶರ್ಮಾ ಬಿಡುಗಡೆಗಾಗಿ ಶಿಫಾರಸು ಮಾಡಿತ್ತು. ಮೇ 11 ರಂದು ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಆರ್‌ಬಿ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಕೇಂದ್ರ ಸಚಿವ ವೆನೋದ್ ಶರ್ಮಾ ಅವರ ಪುತ್ರ ಮನು ಶರ್ಮಾ  1999 ರಲ್ಲಿ ಜೆಸ್ಸಿಕಾ ಲಾಲ್ ಹತ್ಯೆ ನಡೆಸಿದ್ದಕ್ಕಾಗಿ 2006 ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

ಇದಕ್ಕೆ ಮುನ್ನ ವಿಚಾರಣಾ ನ್ಯಾಯಾಲಯ ಆತನನ್ನು ಖುಲಾಸೆಗೊಳಿಸಿತ್ತು, ಆದರೆ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಕ್ಕೆ ಸಂಬಂಧ ಸುಪ್ರೀಂ ಕೋರ್ಟ್ ಸಹ ಜೀವಾವಧಿ ಶಿಕ್ಷೆಯನ್ನು ಏಪ್ರಿಲ್ 2010 ರಲ್ಲಿ ಎತ್ತಿಹಿಡಿದಿದೆ.

ಏಪ್ರಿಲ್ 30, 1999 ರ ರಾತ್ರಿ ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದ ಕುತುಬ್ ಕೊಲೊನೇಡ್ ನಲ್ಲಿ  ಸಮಾಜವಾದಿ ಬಿನಾ ರಮಣಿ ಒಡೆತನದ ಟೆಮರಿಂಡ್ ಕೋರ್ಟ್ ರೆಸ್ಟೋರೆಂಟ್ ನಲ್ಲಿ  ಜೆಸ್ಸಿಕಾ ಲಾಲ್ ಮದ್ಯ ಸೇವನೆಗೆ ನಿರಾಕರಿಸಿದ್ದಕ್ಕಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

SCROLL FOR NEXT