ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಮಿಜೋರಾಂನಲ್ಲಿ 2ವಾರಗಳ ಸಂಪೂರ್ಣ ಲಾಕ್ ಡೌನ್!
ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಇಡೀ ದೇಶ ಅನ್ ಲಾಕ್ ನತ್ತ ಮುಖ ಮಾಡಿರುವಂತೆಯೇ ಅತ್ತ ಮಿಜೋರಾಂ ಸರ್ಕಾರ ಮಾತ್ರ 2 ವಾರಗಳ ಸಂಪೂರ್ಣ ಲಾಕ್ ಡೌನ್ ಹೇರಿದೆ.
ಐಜ್ವಾಲ್: ಮಾರಕ ಕೊರೋನಾ ವೈರಸ್ ಲಾಕ್ ಡೌನ್ ಬಳಿಕ ಇಡೀ ದೇಶ ಅನ್ ಲಾಕ್ ನತ್ತ ಮುಖ ಮಾಡಿರುವಂತೆಯೇ ಅತ್ತ ಮಿಜೋರಾಂ ಸರ್ಕಾರ ಮಾತ್ರ 2 ವಾರಗಳ ಸಂಪೂರ್ಣ ಲಾಕ್ ಡೌನ್ ಹೇರಿದೆ.
ಹೌದು.. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿ ಕೊರೋನಾ ಮುಕ್ತವಾಗುತ್ತಿರುವ ಈಶಾನ್ಯ ಭಾರತದ ರಾಜ್ಯ ಮಿಜೋರಾಂ ನಲ್ಲಿ ದಿಢೀರನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡಬಂದ ಹಿನ್ನಲೆಯಲ್ಲಿ ಮಿಜೋರಾಂ ಸರ್ಕಾರ 2 ವಾರಗಳ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ ಡೌನ್ ಹೇರಿದೆ. ಇದೇ ಜೂನ್ 9 ರಿಂದ 2 ವಾರಗಳ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಲಿದೆ ಎಂದು ಸಿಎಂ ಝೋರಂತಂಗಾ ಹೇಳಿದ್ದಾರೆ. \
ಅಂತೆಯೇ ಮಿಜೋರಾಂನಲ್ಲಿ ಕ್ವಾರಂಟೈನ್ ಅವಧಿಯನ್ನು 21 ದಿನಗಳಿಗೆ ಏರಿಕೆ ಮಾಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಜಾರಿಗೆ ಬರಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.