ಸಂಗ್ರಹ ಚಿತ್ರ 
ದೇಶ

ಅತಿಯಾಗಿ ಟಿವಿ ನೋಡುತ್ತಿದ್ದ ಮಗನಿಗೆ ಬೈದ ತಾಯಿ: 14 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು!

ಅತಿಯಾಗಿ ಟಿವಿ ನೋಡುತ್ತಿದ್ದ ಮಗನಿಗೆ ತಾಯಿಯೊಬ್ಬಳು ಬೈದು ಬುದ್ದಿ ಹೇಳಿದ ಕಾರಣಕ್ಕೆ ನೊಂದ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 

ಪುಣೆ: ಅತಿಯಾಗಿ ಟಿವಿ ನೋಡುತ್ತಿದ್ದ ಮಗನಿಗೆ ತಾಯಿಯೊಬ್ಬಳು ಬೈದು ಬುದ್ದಿ ಹೇಳಿದ ಕಾರಣಕ್ಕೆ ನೊಂದ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 

ಬಿಬ್ವೇವಾಡಿ ಎಂಬ ಪ್ರದೇಶದ ನಿವಾಸಿಯಾಗಿದ್ದ ಆದರ್ಶ್ ಚಾವ್ಲ್ ಎಂಬ ಬಾಲರಕ ಮಂಗಳವಾರ ಬೆಳಗ್ಗಿನಿಂದಲೂ ಟಿವಿ ಮುಂದೆಯೇ ಕುಳಿತುಕೊಂಡಿದ್ದ. ಇದನ್ನು ಕಂಡ ತಾಯಿ ಬೈದು ಬುದ್ದಿ ಹೇಳಿ, ಟಿವಿಯನ್ನು ಆಫ್ ಮಾಡಿದ್ದಾರೆ. 

ಇದರಿಂದ ನೊಂದ ಬಾಲಕ ಮಹಡಿ ಮೇಲೆ ತೆರಳಿ ಸೀಲಿಂಗ್ ಫ್ಯಾನ್'ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಬಾಲಕ ನೇಣಿಗೆ ಶರಣಾಗುವ ವೇಳೆ ಆತನ ಸಹೋದರಿ ಕೂಡ ಮಹಡಿ ಮೇಲೆಯೇ ಇದ್ದು, ಕೂಡಲೇ ಕೂಗಾಡಿದ್ದಾಳೆ. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಹಾಗೂ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮಿತ್ ಶಾ 'ಉಪನ್ಯಾಸ' ಕೇಳುವ ಆಸಕ್ತಿ ಈಗ ನಮ್ಮಲ್ಲಿ ಉಳಿದಿಲ್ಲ; ಅವರ ವರ್ಚಸ್ಸಿನ 'ಬಲೂನ್' ಟುಸ್ ಆಗಿದೆ: ರಾಹುಲ್ ಗಾಂಧಿ

ಡೇಟಿಂಗ್ ಆ್ಯಪ್‌, ಇಂಟಿಮೇಟ್ ಫೋಟೋಗಳು': ಯುವಕರಿಗೆ ಬಲೆ ಬೀಸಿದ ಯುವತಿ; ಬರೋಬ್ಬರಿ ₹6 ಕೋಟಿ ವಂಚನೆ!

ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಪ್ರತಿಪಕ್ಷಗಳ ಬೇಡಿಕೆ: 'ಉತ್ತರಿಸಲು ಸಿದ್ಧ'- ಅಮಿತ್ ಶಾ ಪ್ರತಿಕ್ರಿಯೆ

ಡಿ.ಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್– ವಸತಿ ಖಾತೆ?

ಪರಪ್ಪನ ಅಗ್ರಹಾರ ಜೈಲಿನಲ್ಲೂ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್, ಪೆನ್‌ಡ್ರೈವ್ ಪತ್ತೆ: ಮಾಜಿ ಸಂಸದನ ವಿರುದ್ಧ ಕೇಸ್ ದಾಖಲು