ದೇಶ

ಸ್ಥಳೀಯ ವಿವಾದ ಕಾರಣ ನೇಪಾಳಿ ಪೊಲೀಸರಿಂದ ಗುಂಡಿನ ದಾಳಿ; ಎಸ್ಎಸ್ ಬಿ ಮಹಾ ನಿರ್ದೇಶಕರ ಸ್ಪಷ್ಟನೆ

Srinivas Rao BV

ನವದೆಹಲಿ: ಭಾರತ-ನೇಪಾಳ ಗಡಿಯ ಸೀತಾಮಾರ್ಹಿ ಜಿಲ್ಲೆಯಲ್ಲಿ ನಡೆದಿರುವ ಗುಂಡಿನ ದಾಳಿ ಘಟನೆ ನೇಪಾಳ ಭೂ ಪ್ರದೇಶ ವ್ಯಾಪ್ತಿಯೊಳಗೆ ನಡೆದಿರುವ ಸ್ಥಳೀಯ ವಿಷಯವಾಗಿದೆ ಎಂದು ಸಹಸ್ತ್ರ ಸೀಮಾ ಬಲ್ (ಎಸ್‌ಎಸ್ ಬಿ) ಮಹಾ ನಿರ್ದೇಶಕ ಕುಮಾರ್ ರಾಜೇಶ್ ಚಂದ್ರ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಸ್ಥಳದಿಂದ ಬಂದಿರುವ ವರದಿಗಳ ಪ್ರಕಾರ, ಘಟನೆ ಸಂಪೂರ್ಣವಾಗಿ ಸ್ಥಳೀಯ ವಿಷಯವಾಗಿದ್ದು, ಭಾರತದ ಕಡೆಯ ಜಾನಕಿ ನಗರ ಗ್ರಾಮದ ಗಡಿಯ ನಿವಾಸಿಗಳು ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಗಳ ನಡುವೆ ಇಂದು ಬೆಳಿಗ್ಗೆ ನಡೆದ ಗಲಾಟೆಯ ನಂತರ ಈ ಘಟನೆ  ನಡೆದಿದೆ ಎಂದು ಚಂದ್ರ ಹೇಳಿದ್ದಾರೆ.

ಜಾನಕಿ ನಗರದ ಕುಟುಂಬವೊಂದರಲ್ಲಿ ವಿವಾಹವಾಗಿದ್ದ ಮಹಿಳೆ ನೇಪಾಳ ಕಡೆಯಿಂದ ಕೆಲವು ಸಂಬಂಧಿಕರೊಂದಿಗೆ ತನ್ನ ಅತ್ತೆಯ ಮನೆಗೆ ಆಗಮಿಸುತ್ತಿದ್ದರು. ನೇಪಾಳದಲ್ಲಿ ಕೋವಿಡ್ ನಿರ್ಬಂಧಗಳು ಜಾರಿಯಲ್ಲಿದ್ದು, ಜನರು ಗುಂಪುಗೂಡದಂತೆ ಪೊಲೀಸರು ಸೂಚಿಸಿದ್ದಾರೆ. ಇದರಿಂದ ಜಾನಕಿ ನಗರ ನಿವಾಸಿಗಳು ಹಾಗೂ ನೇಪಾಳ ಪೊಲೀಸರ ನಡುವೆ ಗಲಾಟೆಗೆ ಕಾರಣವಾಗಿ ಕೊನೆಗೆ ಗುಂಡು ಹಾರಿಸುವ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

SCROLL FOR NEXT