ಇಸ್ಲಾಮಾಬಾದ್: ಕಾಶ್ಮೀರವನ್ನು ಭಾರತದ ಭಾಗ ಎಂದು ತೋರಿಸಿದ್ದ ಪಾಕಿಸ್ತಾನದ ಪಿ.ಟಿವಿ ಪತ್ರಕರ್ತರನ್ನು ವಜಾಗೊಳಿಸಲಾಗಿದೆ.
ಪಾಕಿಸ್ತಾನದ ಭೂಪಟವನ್ನು ತಪ್ಪಾಗಿ ತೋರಿಸಿ ಕಾಶ್ಮೀರವನ್ನು ಭಾರತದ ಭಾಗವಾಗಿ ಗುರುತಿಸಿರುವ ಭೂಪಟವನ್ನು ಬಿತ್ತರಿಸಿದ್ದ ಪಿಟಿವಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್ ನ ಸಂಸತ್ ನಿಂದ ಆಗ್ರಹ ವ್ಯಕ್ತವಾಗಿತ್ತು. ಜೂ. ರಂದು ಮಾಹಿತಿ ಮತ್ತು ಪ್ರಸಾರ ವಿಭಾಗದ ಸ್ಥಾಯಿಸಮಿತಿಗೆ ಈ ವಿವಾದವನ್ನು ಕಳಿಸಲಾಗಿತ್ತು.
ಸಂಸತ್ ನ ಒತ್ತಡದಿಂದಾಗಿ ಪಿ.ಟಿವಿ ಇಬ್ಬರು ಪತ್ರಕರ್ತರ ವಿರುದ್ಧ ಕ್ರಮ ಕೈಗೊಂಡಿದ್ದು ಅವರನ್ನು ವಜಾಗೊಳಿಸಿದೆ. ಈ
ಬಗ್ಗೆ ಸ್ಪಷ್ಟನೆ ನೀಡಿರುವ ಪಿ.ಟಿವಿ ಬೇಜವಾಬ್ದಾರಿತನವನ್ನು ತಾನು ಸಹಿಸುವುದಿಲ್ಲ ಎಂದು ಹೇಳಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿಯೂ ಹೇಳಿದೆ.