ದೇಶ

ಶಿವರಾಜ್ ಸಿಂಗ್ ರಾಹುಲ್ ಗಾಂಧಿಯ ನಕಲಿ ವಿಡಿಯೋ ಹಂಚಿದ್ದಾರೆ, ಎಫ್ಐಆರ್ ದಾಖಲಿಸುತ್ತೇವೆ: ದಿಗ್ವಿಜಯ್ ಸಿಂಗ್ 

Srinivas Rao BV

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ಹಳೆಯ ಟ್ವೀಟ್ ಗೆ ಸಂಬಂಧಿಸಿದಂತೆ ಎಫ್ಐಆರ್ ವಾರ್ ಪ್ರಾರಂಭವಾಗಿದೆ. 

ಕಮಲನಾಥ್ ನೇತೃತ್ವದ ಈ ಹಿಂದಿನ ಸರ್ಕಾರದ ಮದ್ಯನೀತಿಗೆ ಸಂಬಂಧಿಸಿದಂತೆ ಶಿವರಾಜ್ ಸಿಂಗ್ ಚೌಹಾಣ್ ಅವರ ಹಳೆಯ ಹೇಳಿಕೆಯನ್ನು ಎಡಿಟ್ ಮಾಡಿ ಹಂಚಿಕೆ ಮಾಡಿದ್ದ ದಿಗ್ವಿಜಯ್ ಸಿಂಗ್ ಹಾಗೂ 11 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

ಈ ಬೆನ್ನಲ್ಲೇ ಹೇಳಿಕೆ ನೀಡಿರುವ ದಿಗ್ವಿಜಯ್ ಸಿಂಗ್, ಈ ಹಿಂದೆ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಹುಲ್ ಗಾಂಧಿ ಅವರ ಹೇಳಿಕೆಯ ವಿಡಿಯೋವನ್ನು ಎಡಿಟ್ ಮಾಡಿ ಹಂಚಿದ್ದರ ವಿರುದ್ಧ ತಾವೂ ಅದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ.  

2019 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣವನ್ನು ಶಿವರಾಜ್ ಸಿಂಗ್ ಚೌಹಾಣ್ ಮೇ, 16, 2019 ರಲ್ಲಿ ಶೇರ್ ಮಾಡಿ, ಏನಿದು ರಾಹುಲ್ ಜೀ, ರೈತರ ಸಾಲ ಮನ್ನಾ ಮಾಡದ ಮುಖ್ಯಮಂತ್ರಿಯನ್ನು ಕನಿಷ್ಟ ಭಾಷಣದಲ್ಲಾದರೂ ಬದಲಾವಣೆ ಮಾಡಿದ್ದೀರಲ್ಲಾ... ಎಂದು ಹೇಳಿದ್ದರು. 

ಶಿವರಾಜ್ ಸಿಂಗ್ ಚೌಹಾಣ್ ಅವರು ಹಂಚಿದ್ದ 13 ಸೆಕೆಂಡ್ ನಷ್ಟಿರುವ ವಿಡಿಯೋದ ಮೂಲ ಪ್ರತಿಯಲ್ಲಿ ರಾಹುಲ್ ಗಾಂಧಿ ಅವರು, ಕಮಲ್ ನಾಥ್, ಮಧ್ಯಪ್ರದೇಶದ ಮುಖ್ಯಮಂತ್ರಿಗಳು, ಭುಪೇಶ್ ಬಘೇಲ್ ಚತ್ತೀಸ್ ಗಢದ ಸಿಎಂ, ಹುಕುಂ ಸಿಂಗ್ ಕರದ, ಪಿ.ಸಿ ಶರ್ಮಾ ಅವರುಗಳನ್ನುದ್ದೇಶಿಸಿ ಮಾತನಾಡಿದ್ದರು, ಆದರೆ ಅದನ್ನು ಎಡಿಟ್ ಮಾಡಿ, ಮಧ್ಯಪ್ರದೇಶದ ಸಿಎಂ ಭುಪೇಶ್ ಬಘೇಲ್ ಎಂದು ಹೇಳಿರುವಂತೆ ಮಾಡಲಾಗಿತ್ತು. 
 

SCROLL FOR NEXT