ಶಿಮ್ಲಾ: ಚೀನಾ ಯೋಧರೊಂದಿಗಿನ ಸಂಘರ್ಷದಲ್ಲಿ ವೀರಮರಣನಪ್ಪಿದ ಸೆಪೋಯ್ ಅಂಕುಶ್ ಠಾಕೂರ್ ಅವರ ಹೆಸರನ್ನು ಹಿಮಾಚಲ ಪ್ರದೇಶದಲ್ಲಿನ ಶಾಲೆಗೆ ಮರುನಾಮಕರಣ ಮಾಡಲಾಗಿದೆ.
ಸಿಎಂ ಜೈರಾಮ್ ಠಾಕೂರ್ ಅವರು ಕೊರೋಹ್ತಾ ಗ್ರಾಮದಲ್ಲಿರುವ ಹುತಾತ್ಮ ಯೋಧ ಸೆಪೋಯ್ ಅಂಕುಶ್ ಠಾಕೂರ್ ಅವರ ಮನೆಗೆ ತೆರಳಿ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದರು. ಈ ವೇಳೆ ಕುಟುಂಬಸ್ಖರನ್ನು ಸಂತೈಸಿದ ಅವರು ಕುಟುಂಬಸ್ಥರಿಗೆ 20 ಲಕ್ಷ ರೂ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಯೋಧ ಸೆಪೋಯ್ ಅಂಕುಶ್ ಠಾಕೂರ್ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಅವರ ಕುರಿತಂತೆ ದೇಶ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ ಎಂದು ಹೇಳಿದರು. ಅಂತೆಯೇ ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕರು ತಮ್ಮ ಗ್ರಾಮದಲ್ಲಿ ಯೋಧನ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಅಂತೆಯೇ ಯೋಧನ ಗ್ರಾಮಕ್ಕೆ ಸಾಗುವ ರಸ್ತೆಗಳನ್ನು ಕೂಡವೇ ದುರಸ್ತಿ ಮಾಡಲಾಗುತ್ತದೆ ಎಂದು ಹೇಳಿದರು.
ಇನ್ನು ಶಾಲಾ ಮಕ್ಕಳ ನೆನಪಿನಲ್ಲಿ ವೀರಯೋಧನ ನೆನಪು ಅಚ್ಚಳಿಯುವಂತೆ ಮಾಡಿದ ಹಿಮಾಚಲ ಪ್ರದೇಶ ಸರ್ಕಾರದ ನಡೆಗೆ ಇದೀಗ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.