ದೇಶ

ಚೀನಾದವರಿಗೆ ಅತಿಥ್ಯ ನಿರ್ಬಂಧ ಹೇರಲು ದೆಹಲಿ ಹೋಟೆಲ್ ಮಾಲೀಕರ ಸಂಘ ನಿರ್ಧಾರ!

Nagaraja AB

ನವದೆಹಲಿ: ಗಡಿ ಘರ್ಷಣೆ ವಿಚಾರದಲ್ಲಿ ಚೀನಾದ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವಂತೆಯೇ ರಾಷ್ಟ್ರ ರಾಜಧಾನಿಯಲ್ಲಿ ಚೀನಾದ ಪ್ರಜೆಗಳಿಗೆ ಅತಿಥ್ಯ ನೀಡದಿರಲು ದೆಹಲಿ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.

ದೇಶದ ಪ್ರತಿಯೊಬ್ಬರೂ ಚೀನಾದ ಆಕ್ರಮಣವನ್ನು ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸುತ್ತಿದ್ದು, ನಮ್ಮ ಹೋಟೆಲ್ ಗಳಲ್ಲಿ ಚೀನಾದ ಜನರಿಗೆ ಯಾವುದೇ ಬುಕ್ಕಿಂಗ್  ಮಾಡಲು ಹಾಗೂ ನಮ್ಮ ಹೋಟೆಲ್ ಗಳಲ್ಲಿ ತಂಗಲು ಅವಕಾಶ ನೀಡುವುದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಗುಪ್ತಾ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಮ್ಮ ದೇಶವನ್ನು ಹಾಳು ಮಾಡುವ ಉದ್ದೇಶ ಹೊಂದಿರುವ ಚೀನಾದ ಜನರನ್ನು ಹೇಗೆ ಒಳಗೆ ಬಿಟ್ಟುಕೊಳ್ಳಲು ಸಾಧ್ಯ, ಹೋಟೆಲ್ ಗಳಲ್ಲಿ ವಾಸ್ತವ್ಯಕ್ಕೆ ಹೇಗೆ ಅವಕಾಶ ಕೊಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನಾಪಡೆಗಳೊಂದಿಗೆ ನಡೆದ ಮುಖಾಮುಖಿ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬೆನ್ನಲ್ಲೇ ದೆಹಲಿ ಹೋಟೆಲ್ ಮಾಲೀಕರ ಸಂಘ ಈ ನಿರ್ಧಾರ ಕೈಗೊಂಡಿದೆ.

ಈ ಘರ್ಷಣೆಯಲ್ಲಿ ಚೀನಾದವರು ಕೂಡಾ 20 ಮಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿರುವುದಾಗಿ ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ಇತ್ತೀಚಿಗೆ ಹೇಳಿಕೆ ನೀಡಿದ್ದರು.

SCROLL FOR NEXT