ದೇಶ

ಜಮ್ಮು-ಕಾಶ್ಮೀರ: ಲಷ್ಕರ್ -ಇ-ತೊಯ್ಬಾ ಸಂಘಟನೆ ಅಡಗು ತಾಣ ಧ್ವಂಸ, 5 ಉಗ್ರರ ಸೆರೆ

Sumana Upadhyaya

ಬುದ್ಗಾಮ್(ಜಮ್ಮು-ಕಾಶ್ಮೀರ): ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿರುವ ಅಡಗು ತಾಣ ಧ್ವಂಸಗೊಳಿಸಿದ ಭದ್ರತಾ ಪಡೆ ಪೊಲೀಸರು ಸಂಘಟನೆಗೆ ಸೇರಿರುವ 5 ಮಂದಿ ಉಗ್ರರನ್ನು ಬಂಧಿಸುವಲ್ಲಿ ಗುರುವಾರ ಯಶಸ್ವಿಯಾಗಿದ್ದಾರೆ.

ಬುದ್ಗಾಮ್ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ನ ಆರ್ಮಿ 2 ನ ಪೊಲೀಸರು ನಿಖರ ಮಾಹಿತಿ ಪಡೆದು ಶೋಧ ಕಾರ್ಯಾಚರಣೆ ವೇಳೆ ನರ್ಬಾಲ್ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಉಗ್ರರನ್ನು ಇಮ್ರಾನ್ ರಶೀದ್, ಇಫ್ಶಾನ್ ಅಹ್ಮದ್ ಘನಿ, ಒವೈಸ್ ಅಹ್ಮದ್, ಮೊಹ್ಸಿನ್ ಖದೀರ್ ಮತ್ತು ಅಬಿದ್ ರತೆರ್ ಎಂದು ಗುರುತಿಸಲಾಗಿದೆ.

SCROLL FOR NEXT