ಕೋವಿಡ್-19 ಔಷಧ 
ದೇಶ

ಕೋವಿಡ್-19 ಔಷಧ: ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಮತ್ತಿತರ 5 ರಾಜ್ಯಗಳಿಗೆ ರವಾನೆ

ಹೈದರಾಬಾದ್ ಮೂಲದ ಔಷಧಿ ತಯಾರಕ ಕಂಪನಿ ಹೆಟೆರೊ, ಕಂಡುಹಿಡಿದು ಪ್ರಯೋಗಕ್ಕೆ ಒಳಪಟ್ಟಿರುವ ಕೋವಿಡ್-19 ನಿಯಂತ್ರಣ ಔಷಧ 'ರೆಮ್ಡಿ ಸಿವಿರ್' ಮಾರಾಟಕ್ಕೆ ಅನುಮೋದನೆ ದೊರೆತಿದ್ದು,ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20 ಸಾವಿರ ಬಾಟಲಿಗಳನ್ನು ಕಳುಹಿಸಲಾಗುತ್ತಿದೆ.

ನವದೆಹಲಿ: ಹೈದರಾಬಾದ್ ಮೂಲದ ಔಷಧಿ ತಯಾರಕ ಕಂಪನಿ ಹೆಟೆರೊ, ಕಂಡುಹಿಡಿದು ಪ್ರಯೋಗಕ್ಕೆ ಒಳಪಟ್ಟಿರುವ ಕೋವಿಡ್-19 ನಿಯಂತ್ರಣ ಔಷಧ 'ರೆಮ್ಡಿ ಸಿವಿರ್' ಮಾರಾಟಕ್ಕೆ ಅನುಮೋದನೆ ದೊರೆತಿದ್ದು,ಮೊದಲ ಹಂತದಲ್ಲಿ ಮಹಾರಾಷ್ಟ್ರ, ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20 ಸಾವಿರ ಬಾಟಲಿಗಳನ್ನು ಕಳುಹಿಸಲಾಗುತ್ತಿದೆ.

ದೇಶದಲ್ಲಿ ಕೋವಿಪಾರ್ ಎಂಬ ಬ್ರಾಂಡ್ ಹೆಸರಿನಲ್ಲಿ ಇದರ ಮಾರಾಟ ಮಾಡಲಾಗುತ್ತಿದ್ದು, ಕೋವಿಡ್-19 ನಿಂದ ಪರಿಸ್ಥಿತಿ ತೀವ್ರಗೊಂಡಿರುವ ತಮಿಳು ನಾಡು,ಗುಜರಾತ್ ಮತ್ತಿತರ ರಾಜ್ಯಗಳು ಮೊದಲ ಹಂತದಲ್ಲಿ ಔಷಧವನ್ನು ಪಡೆಯಲಿವೆ. ತೆಲಂಗಾಣ ಕೂಡಾ ಮೊದಲ ಹಂತದಲ್ಲಿ ಔಷಧ ಪಡೆದುಕೊಳ್ಳಲಿದೆ. 100 ಗ್ರಾಮ್ ಬಾಟಲಿಗೆ 5 ಸಾವಿರದ 400 ರೂ. ಆಗಲಿದೆ ಎಂದು ಹೆಟೆರೂ ಹೇಳಿದೆ.

ವಯಸ್ಕರು ಮತ್ತು ಮಕ್ಕಳಿಗೆ ಮೊದಲ ದಿನ 200 ಮಿಲಿ ಗ್ರಾಮ್ ಔಷಧ ನೀಡಬೇಕು ನಂತರ ಪ್ರತಿದಿನ 100 ಗ್ರಾಮ್ ನಂತೆ 5 ದಿನಗಳವರೆಗೂ ನೀಡಬೇಕಾಗುತ್ತದೆ ಎಂದು ಶಿಫಾರಸ್ಸು ಮಾಡಲಾಗಿದೆ.

ಮುಂದಿನ ಹಂತದಲ್ಲಿ ಕೊಲ್ಕತ್ತಾ, ಇಂದೋರ್, ಭೂಪಾಲ್, ಲಖೌನ್, ಪಾಟ್ನಾ, ಭುವನೇಶ್ವರ್, ರಾಂಚಿ, ವಿಜಯವಾಡ, ಕೊಚ್ಚಿ, ತ್ರಿವೇಂದ್ರಮ್ ಮತ್ತು ಗೋವಾ ರಾಜ್ಯಗಳಿಗೆ ಔಷಧವನ್ನು ಪೂರೈಸಲಾಗುತ್ತಿದೆ.ಇನ್ನೂ ಮೂರು ನಾಲ್ಕು ವಾರಗಳಲ್ಲಿ 1 ಲಕ್ಷ ಬಾಟಲಿಗಳನ್ನು ತಯಾರಿಸುವ ಗುರಿಯನ್ನು ಕಂಪನಿ ಹೊಂದಿದೆ. 

ಪ್ರಸ್ತುತ ಹೈದ್ರಾಬಾದಿನಲ್ಲಿ ಈ ಔಷಧವನ್ನು ತಯಾರಿಸಲಾಗುತ್ತಿದ್ದು, ಆಸ್ಪತ್ರೆಗಳು ಮತ್ತು ಸರ್ಕಾರದ ಮೂಲಕ ಮಾತ್ರ ಔಷಧ ದೊರೆಯಲಿದೆ. ರಿಟೈಲ್ ನಲ್ಲಿ ದೊರೆಯುವುದಿಲ್ಲ .ಲೀವರ್ ಕಾಯಿಲೆ, ಕಿಡ್ನಿ ವೈಫಲ್ಯ,ಗರ್ಭಿಣಿಯರು ಮತ್ತು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧ ನೀಡುವುದಿಲ್ಲ ಎಂದು ಎಂದು ಹೆಟೆರೊ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವಂಶಿ ಕೃಷ್ಣ ಬಂಡಿ ಹೇಳಿದ್ದಾರೆ.

ಔಷಧ ತಯಾರಿಕ ಸಿಪ್ಲಾ ಕಂಪನಿ ಕೂಡಾ ಈ ಔಷಧವನ್ನು 5 ಸಾವಿರಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ.ಕೋವಿಡ್-19 ಪ್ರಕರಣಗಳು ಹೆಚ್ಚಾದಂತಹ ಸಂದರ್ಭದಲ್ಲಿ ಸಿಪ್ಲಾ ಮತ್ತು ಹೆಟೆರೊ ಕಂಡುಹಿಡಿರುವ ಔಷಧಗಳನ್ನು ಬಳಸಿಕೊಳ್ಳುವಂತೆ ರೆಗ್ಯುಲೇಟರ್ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

ಕೋವಿಡ್-19 ರೋಗಿಗಳಿಗೆ ಈ ಔಷಧ ಪ್ರಯೋಗದ ನಂತರ ಮೊದಲ ಬಾರಿಗೆ ಪ್ರಗತಿ ಕಂಡುಬಂದಿದೆ. ಅಮೆರಿಕಾ, ದಕ್ಷಿಣ ಕೊರಿಯಾದಲ್ಲಿ ತೀವ್ರ ಅನಾರೋಗ್ಯಪೀಡಿತ ರೋಗಿಗಳಿಗೆ ಬಳಸಲು ಅನುಮೋದನೆ ಪಡೆದುಕೊಂಡಿದೆ. ಜಪಾನ್ ನಿಂದಲೂ ಪೂರ್ಣ ಮಟ್ಟದ ಅನುಮೋದನೆ ದೊರೆತಿದೆ. ಅಮೆರಿಕಾದಲ್ಲಿ ಬೆಲೆಯನ್ನು ಇನ್ನು ನಿಗದಿಪಡಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

Uniform Civil Code: ಇದು ಸಂವಿಧಾನ ಉಲ್ಲಂಘನೆ, ಮುಸ್ಲಿಮರ ಮೇಲೆ ಹಿಂದೂ ಕಾಯ್ದೆ ಹೇರಿಕೆ ಒಪ್ಪಲ್ಲ; ಅಸಾದುದ್ದೀನ್ ಓವೈಸಿ

ಮಡಿಕೇರಿ: 3 ದಿನಗಳಾದರೂ ಪತ್ತೆಯಾಗದ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ, ANF ನಿಂದ ತೀವ್ರ ಹುಡುಕಾಟ

ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ರಕ್ಷಿಸಿದರೆ, ಮೋದಿ ಸರ್ಕಾರ ಜನರ ಜೇಬು ಕತ್ತರಿಸುತ್ತಿದೆ: ರಂದೀಪ್ ಸಿಂಗ್ ಸುರ್ಜೆವಾಲಾ

SCROLL FOR NEXT