ಸಂಗ್ರಹ ಚಿತ್ರ 
ದೇಶ

ಕೊರೋನಾ ಮಧ್ಯೆ ಭಾರತ ಸೇರಿ ಹಲವು ದೇಶಗಳ ಜೊತೆ ತಗಾದೆ, ಚೀನಾ ಭಾರಿ ಬೆಲೆ ತೆರಬೇಕಿದೆ: ತಜ್ಞರು

ಕೊರೋನಾ ಮಹಾಮಾರಿ ವ್ಯಾಪಾಕವಾಗಿ ಹರಡುತ್ತಿರುವ ಮಧ್ಯೆಯೇ ಪೂರ್ವ ಲಡಾಖ್ ನಲ್ಲಿ ಚೀನಾ ಭಾರತದ ವಿರುದ್ಧ ಆಕ್ರಮಣಕಾರಿ ಮಿಲಿಟರಿ ನಡೆ ಅನುಸರಿಸುತ್ತಿರುವುದಕ್ಕೆ ದಶಕಗಳ ಕಾಲ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ನವದೆಹಲಿ: ಕೊರೋನಾ ಮಹಾಮಾರಿ ವ್ಯಾಪಾಕವಾಗಿ ಹರಡುತ್ತಿರುವ ಮಧ್ಯೆಯೇ ಪೂರ್ವ ಲಡಾಖ್ ನಲ್ಲಿ ಚೀನಾ ಭಾರತದ ವಿರುದ್ಧ ಆಕ್ರಮಣಕಾರಿ ಮಿಲಿಟರಿ ನಡೆ ಅನುಸರಿಸುತ್ತಿರುವುದಕ್ಕೆ ದಶಕಗಳ ಕಾಲ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೊರೋನಾ ವೈರಸ್ ಚೀನಾ ಸೃಷ್ಟಿ ಎಂದು ಆರೋಪಿಸುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಸೆಟೆದುನಿಂತಿದ್ದಾರೆ. ಇನ್ನು ಹಾಂಕಾಂಗ್ ರಾಜಕೀಯದಲ್ಲಿ ಚೀನಾ ಮೂಗು ತೂರಿಸುತ್ತಿದೆ. ಅಮೆರಿಕ ಮತ್ತು ಆಸ್ಟ್ರೇಲಿಯಾ ಜೊತೆಗಿನ ವಾಣಿಜ್ಯ ಸಮರ, ಇದೆಲ್ಲ ವಿಶ್ವದಲ್ಲಿ ಅದನ್ನು ಒಂಟಿಯನ್ನಾಗಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. 

ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಇಡೀ ಜಗತ್ತೆ ಹೋರಾಟ ನಡೆಸುತ್ತಿದ್ದರೆ ಅತ್ತ ಚೀನಾ ಮಾತ್ರ ಪೂರ್ವ ಲಡಾಖ್ ಮತ್ತು ದಕ್ಷಿಣ ಚೀನಾದಲ್ಲಿ ಕಳೆದೆರಡು ತಿಂಗಳಿಂದ ಭಾರಿ ದೊಡ್ಡ ಪ್ರಮಾಣದ ಹಣವನ್ನೇ ವ್ಯಯಿಸಿರುವುದು ಬೀಜಿಂಗ್ ನ ನೈಜ ಮುಖವನ್ನು ಅನಾವರಣ ಮಾಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಕೊರೋನಾ ವೈರಸ್ ಚೀನಾ ಮೇಡ್ ಎಂದು ಹಲವು ದೇಶಗಳು ಧ್ವನಿಯೆತ್ತುತ್ತಿವೆ. ಜಾಗತಿಕ ಮಟ್ಟದಲ್ಲಿ ಹೆಸರು ಕೆಡಿಸಿಕೊಳ್ಳುತ್ತಿರುವ ಚೀನಾ ಪೂರ್ವ ಲಡಾಖ್ ನಲ್ಲಿ ಆಕ್ರಮಣಕಾರಿ ಮಿಲಿಟರಿ ವರ್ತನೆಯನ್ನು ತೋರಿದ್ದು ಈ ಮೂಲಕ ತನ್ನ ತನವನ್ನು ಜಗತ್ತಿನ ಮುಂದೆ ಬಟಾಬಯಲು ಮಾಡಿಕೊಂಡಿದೆ. 

ಭಾರತೀಯ ಯೋಧರನ್ನು ಹತ್ಯೆ ಮಾಡುವ ಮೂಲಕ ಚೀನಾ ಭಾರತ ಮತ್ತು ವಿಶ್ವದ ಕೆಲ ರಾಷ್ಟ್ರಗಳೊಂದಿಗೆ ತನ್ನ ಸ್ನೇಹವನ್ನು ಕೆಡಿಸಿಕೊಂಡಿದೆ. ಇದಕ್ಕೆ ಚೀನಾ ಮುಂದಿನ ಹಲವು ದಶಕಗಳ ಕಾಲ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಸೇನಾಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo crisis|ವಿಮಾನ ಸೇವೆ ವ್ಯತ್ಯಯ ತನಿಖೆಗೆ DGCAಯಿಂದ ಉನ್ನತ ಮಟ್ಟದ ಸಮಿತಿ ರಚನೆ, ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ ಇಂಡಿಗೋ

5ನೇ ದಿನವೂ ಮುಂದುವರಿದ IndiGo ಅವಾಂತರ: ಬೆಂಗಳೂರು ಏರ್ ಪೋರ್ಟ್ ಲ್ಲಿ ಪ್ರಯಾಣಿಕರ ಗೋಳಾಟ, ಪರದಾಟ, ಫ್ಲೈಟ್ ಟಿಕೆಟ್ ದರ ದುಪ್ಪಟ್ಟು-Video

ಆರೋಗ್ಯಕ್ಕೆ ಅತಿ ಮುಖ್ಯ ಒಮೆಗಾ-3 ಕೊಬ್ಬಿನಾಮ್ಲ (ಕುಶಲವೇ ಕ್ಷೇಮವೇ)

‘Indigo ವಿಮಾನ’ ಬಿಕ್ಕಟ್ಟು: ಪ್ರಯಾಣಿಕರ ನೆರವಿಗೆ ಬಂದ ಭಾರತೀಯ ರೈಲ್ವೇ ಇಲಾಖೆ, ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ..!

GST ದರ ಬದಲಾವಣೆಯಿಂದ ರಾಜ್ಯದ ಆದಾಯ ಕುಸಿತ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ

SCROLL FOR NEXT