ಕೇಂದ್ರದಿಂದ 'ಅನ್ ಲಾಕ್ 2' ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ
ಜುಲೈ 1-31ರನಡುವೆ ದೇಶಾದ್ಯಂತ 'ಅನ್ ಲಾಕ್ 2' ಜಾರಿಯಾಗಲಿದ್ದು ಇದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನವದೆಹಲಿ: ಜುಲೈ 1-31ರನಡುವೆ ದೇಶಾದ್ಯಂತ 'ಅನ್ ಲಾಕ್ 2' ಜಾರಿಯಾಗಲಿದ್ದು ಇದಕ್ಕಾಗಿ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾರ್ಗಸೂಚಿಗಳ ಪ್ರಕಾರ, ಶಾಲೆ, ಕಾಲೇಜುಗಳು ಜುಲೈ 31 ರವರೆಗೆ ತೆರ್ಯುವಂತಿಲ್ಲ. ಆನ್‌ಲೈನ್ / ದೂರಶಿಕ್ಷಣಕ್ಕೆ ಅನುಮತಿ ಇದ್ದು ಇದಕ್ಕೆ ಪ್ರೋತ್ಸಾಹವಿದೆ.
ಕಂಟೈನ್‌ಮೆಂಟ್ ವಲಯಗಳಲ್ಲಿಯಥಾಸ್ಥಿತಿ ಜಾರಿಯಲ್ಲಿರಲಿದ್ದು ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ ಸಿಕ್ಕಲಿದೆ.
ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ನಿಗದಿಪಡಿಸಲಾಗಿದೆ.
ಅನ್ ಲಾಕ್ 2ಸಮಯದಲ್ಲಿ ಮೆಟ್ರೋ ರೈಲು, ಚಿತ್ರಮಂದಿರಗಳು, ಜಿಮ್ ಗಳು, ಬಾರ್‌ಗಳು ತೆರ್ಯಲ್ಲ. ಇನ್ನು ಜುಲೈ 31 ರವರೆಗೆ ಅಂತರರಾಷ್ಟ್ರೀಯ ವಿಮಾಯಾನ ಸಹ ಇರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.