ಪಾಗಲ್ ಪ್ರೇಮಿ: ವಿದ್ಯಾರ್ಥಿನಿಯ ಮೇಲೆ ಬಿಸಿ ಎಣ್ಣೆ ಸುರಿದು ವಿಕೃತಿ
ಒನ್ ಸೈಡ್ ಲವ್ ಗೆ ಸಂಬಂಧಿಸಿದ ಪ್ರೇಮ ಪ್ರಕರಣವೊಂದರಲ್ಲಿ, ಯುವಕನೊಬ್ಬ ಸೋಮವಾರ ರಾತ್ರಿ 9 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ.
ಪುದುಚೆರಿ: ಒನ್ ಸೈಡ್ ಲವ್ ಗೆ ಸಂಬಂಧಿಸಿದ ಪ್ರೇಮ ಪ್ರಕರಣವೊಂದರಲ್ಲಿ, ಯುವಕನೊಬ್ಬ ಸೋಮವಾರ ರಾತ್ರಿ 9 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ.
ಯುವಕ ಬಾಲಕಿಯನ್ನು ಪ್ರೀತಿಸುತ್ತಿದ್ದು, ಈ ವಿಷಯ ಆಕೆಗೆ ತಿಳಿದಿರಲಿಲ್ಲ. ಅಲ್ಲದೆ, ಆಕೆ ಹೋದಲ್ಲೆಲ್ಲಾ ಅವನು ಅವಳನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ.
ಇದನ್ನೆಲ್ಲ ಗಮನಿಸಿದ ಆಕೆಯ ಪೋಷಕರು ಗದರಿಸಿ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯುವಕ ಕಳೆದ ರಾತ್ರಿ ಬಾಲಕಿ ನಿದ್ದೆ ಮಾಡುತ್ತಿದ್ದಾಗ ಕಿಟಕಿಯ ಮೂಲಕ ಹುಡುಗಿಯ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸುಟ್ಟಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಯುವಕ ಮಾದೇಶ್ ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ 35 ವರ್ಷದ ಮಹಿಳೆ ತನ್ನ ಶೀಲವನ್ನು ಶಂಕಿಸಿದ್ದಕ್ಕಾಗಿ, ಗುಪ್ತಾಂಗಕ್ಕೆ ಬಿಸಿ ಹಾಲು ಸುರಿದಿದ್ದನ್ನು ಗಮನಿಸಬಹುದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.