ದೇಶ

ಜಮ್ಮು-ಕಾಶ್ಮೀರದಲ್ಲಿ 7 ತಿಂಗಳ ಬಳಿಕ ಸಾಮಾಜಿಕ ಜಾಲತಾಣದ ಮೇಲಿನ ನಿರ್ಬಂಧ ತೆರವು

Srinivas Rao BV

ಶ್ರೀನಗರ: ಆರ್ಟಿಕಲ್ 370 ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಬರೊಬ್ಬರಿ 7 ತಿಂಗಳ ನಂತರ ತೆರವುಗೊಳಿಸಲಾಗಿದೆ. 

ಮಾ.04 ರಂದು ಸರ್ಕಾರ ಪ್ರಕಟಿಸಿರುವ ಆದೇಶದಲ್ಲಿ ನಿರ್ಬಂಧ ತೆರವುಗೊಳಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ ಯಾವೆಲ್ಲಾ ವೆಬ್ ಸೈಟ್ ಗಳ ಬಳಕೆಗೆ ಅವಕಾಶ ನೀಡಲಾಗಿದೆ ಎಂಬ ಬಗ್ಗೆ ಸರ್ಕಾರ ಸ್ಪಷ್ಟವಾದ ಮಾಹಿತಿ ನೀಡಿಲ್ಲ. 

ಇಂದು ಜಾರಿಯಾಗಿರುವ ಆದೇಶ ಮಾ.17 ವರೆಗೆ ಜಾರಿಯಲ್ಲಿರುತ್ತದೆ. ಇದೇ ವೇಳೆ ಜಮ್ಮು-ಕಾಶ್ಮೀರ ಸರ್ಕಾರ  ಕೇಂದ್ರಾಡಳಿತ ಪ್ರದೇಶದಾದ್ಯಂತ ಹೈ-ಸ್ಪೀಡ್ ಇಂಟರ್ ನೆಟ್ ಸೇವೆಗಳ ಮೇಲೆ ವಿಧಿಸಲಾಗಿರುವ  ನಿರ್ಬಂಧವನ್ನು ಮಾ.17 ರ ವರೆಗೆ ವಿಸ್ತರಿಸಿದೆ. ಈ ಕುರಿತ ಆದೇಶವನ್ನು ಜಮ್ಮು-ಕಾಶ್ಮೀರ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಲೀನ್ ಕಬ್ರ ಹೊರಡಿಸಿದ್ದಾರೆ. 

ಇನ್ನು ಮೊಬೈಲ್ ಡಾಟಾ ಸೇವೆಗಳನ್ನು 2 ಜಿ ವೇಗಕ್ಕೆ ಸೀಮಿತಗೊಳಿಸಲಾಗಿದ್ದು, ಪೋಸ್ಟ್ ಪೇಯ್ಡ್ ಸಿಮ್ ಕಾರ್ಡ್ ಹೊಂದಿರುವವರಿಗೆ ಇಂಟರ್ ನೆಟ್ ಸೇವೆಗಳು ಲಭ್ಯವಾಗಲಿವೆ. ಆದರೆ ಪ್ರೀಪೇಯ್ಡ್ ಸಿಮ್ ಕಾರ್ಡ್ ಬಳಕೆದಾರರಿಗೆ ಪೋಸ್ಟ್ ಪೇಯ್ಡ್ ಸಂಪರ್ಕಕ್ಕೆ   ಅನ್ವಯವಾಗುವ ನಿಯಮಗಳ ಅನುಸಾರ ಪರಿಶೀಲನೆ ನಡೆಸುವವರೆಗೂ ಈ ಸೌಲಭ್ಯ ದೊರೆಯುವುದಿಲ್ಲ. 
 

SCROLL FOR NEXT