ತಿರುವನಂತಪುರಂ: ಕೇರಳದ ಐವರಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿದೆ ಎಂದು ಆರೋಗ್ಯ ಸಚಿವೆ ಆರ್ ಕೆ ಶೈಲಜಾ ಹೇಳಿದ್ದಾರೆ.
ಈ ಐವರು ಪಥ್ನಮತ್ತಟ್ಟ ಜಿಲ್ಲೆಗೆ ಸೇರಿದವರಾಗಿದ್ದಾರೆ. ಈ ಪೈಕಿಯಲ್ಲಿ ಮೂವರು ಫೆಬ್ರವರಿ 29 ರಂದು ಇಟಲಿಯಿಂದ ವಾಪಾಸ್ ಬಂದವರಾಗಿದ್ದರೆ ಇನ್ನಿಬ್ಬರು ಅವರ ಸಂಬಂಧಿಕರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಮಾಡಿಸಲಾದ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಕೆಲ ದಿನಗಳ ಹಿಂದೆ ದೇಶದಲ್ಲಿ ಪ್ರಥಮ ಬಾರಿಗೆ ಎಂಬಂತೆ ಕೇರಳದಿಂದಲೇ ಮೂರು ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದವು.
ಚೀನಾದ ವುಹಾನ್ ನಿಂದ ತಾಯ್ನಾಡಿಗೆ ಆಗಮಿಸಿದ್ದ ಮೂವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿದಾಗ ಕೊರೋನಾ ಸೋಂಕು ಪತ್ತೆಯಾಗಿತ್ತು. ನಂತರ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು.