ದೇಶ

ಬಾಂಗ್ಲಾದೇಶಕ್ಕೂ ಹಬ್ಬಿದ ಕೊರೊನಾ ವೈರಸ್: ಪ್ರಧಾನಿ ಮೋದಿ ಪ್ರವಾಸ ರದ್ದು ಸಾಧ್ಯತೆ 

Sumana Upadhyaya

ಢಾಕಾ; ಬಾಂಗ್ಲಾದೇಶದಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾ ಭೇಟಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಸಂಬಂಧ ಅಂತಿಮ ನಿರ್ಧಾರ ಸದ್ಯದಲ್ಲಿಯೇ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.


ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಆಹ್ವಾನದ ಮೇರೆಗೆ ಬಾಂಗ್ಲಾದೇಶ ಸ್ಥಾಪಕ ಶೇಖ್ ಮುಜಿಬರ್ ರಹಮಾನ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇದೇ 17ರಂದು ಅಲ್ಲಿಗೆ ತೆರಳುವ ಕಾರ್ಯಕ್ರಮವಿದೆ. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬೃಹತ್ ಮಟ್ಟದಲ್ಲಿ ಆಯೋಜಿಸಲು ಯೋಚಿಸಿದ್ದ ಕಾರ್ಯಕ್ರಮವನ್ನು ಸಣ್ಣ ಮಟ್ಟದಲ್ಲಿ ನಡೆಸಲು ಬಾಂಗ್ಲಾ ಸರ್ಕಾರ ನಿರ್ಧರಿಸಿದ್ದು ವಿದೇಶಿ ಕಾರ್ಯದರ್ಶಿಗಳ ಭಾಗವಹಿಸುವಿಕೆ ರದ್ದುಗೊಂಡಿದೆ.


ಢಾಕಾದಲ್ಲಿ ಇಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡವರಲ್ಲಿ ಒಬ್ಬರು ಇಟಲಿಗೆ ಪ್ರಯಾಣಿಸಿದವರಾಗಿದ್ದು ಮತ್ತೊಬ್ಬರು ಅವರ ಕುಟುಂಬ ಸದಸ್ಯರಾಗಿದ್ದಾರೆ. 


ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬಿದ ನಂತರ ಬಾಂಗ್ಲಾ ಪ್ರವಾಸವನ್ನು ಪ್ರಧಾನಿಗಳು ರದ್ದುಪಡಿಸಿದರೆ ಇದು ಎರಡನೇ ಪ್ರವಾಸದ ರದ್ದತಿಯಾಗಿದೆ. ಈ ಹಿಂದೆ ಬ್ರುಸೆಲ್ ನ ಶೃಂಗಸಭೆಯನ್ನು ರದ್ದುಪಡಿಸಿದ್ದರು.

SCROLL FOR NEXT