ದೇಶ

ಕೊರೋನಾವೈರಸ್: ವಿದೇಶಗಳಲ್ಲಿ 276 ಮಂದಿ ಭಾರತೀಯರಲ್ಲಿ ಸೋಂಕು

Manjula VN

ಅರಬ್ ದೇಶಗಳಲ್ಲಿ ಸಿಲುಕಿರುವ 6000 ಭಾರತೀಯರು: ಸ್ವದೇಶಕ್ಕೆ ಕರೆತಲರು ಎಲ್ಲಾ ಕ್ರಮ
ನವದೆಹಲಿ:
ವಿದೇಶಗಳಲ್ಲಿ 276 ಮಂದಿ ಭಾರತೀಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದೆ. 

ಅತಿ ಹೆಚ್ಚು ಎಂದರೆ ಇರಾನ್ ನಲ್ಲಿ 255, ಯುಎಿನಲ್ಲಿ 12, ಇಟಲಿಯಲ್ಲಿ 5, ಹಾಂಕಾಂಗ್, ಕುವೈತ್, ರುವಾಂಡಾ ಹಾಗೂ ಶ್ರೀಲಂಕಾದಲ್ಲಿ ತಲಾ ಒಬ್ಬರಿಗೆ ಕೊರೋನಾ ತಾಗಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಮಂತ್ರಿ ವಿ.ಮುರಳೀಧರನ್ ಅವರು ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಯುಎಇನಲ್ಲಿ 8 ಹಾಗೂ ಕುವೈತ್ ನಲ್ಲಿ ಒಬ್ಬರಿ ಭಾರತೀಯರಿಗೆ ಕೊರೋನಾ ಶಂಕೆ ಇದೆ. ಅವರನ್ನು ಪ್ರತ್ಯೇಕವಾಗಿ ಇರಿಸಿ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಅರಬ್ ದೇಶಗಳಲ್ಲೇ 6 ಸಾವಿರ ಭಾರತೀಯರು ಕೊರೋನಾ ಕಾರಣ ತಡೆಹಿಡಿಯಲ್ಪಟ್ಟಿದ್ದಾರೆ. ಇವರಲ್ಲಿ ಇರಾನ್ ನಲ್ಲಿ ಸಿಲುಕಿರುವ ಮೀನುಗಾರರೂ ಇದ್ದಾರೆ. ಅವರಿಗೆ ಭಾರತಕ್ಕೆ ಮರಳಲು ಆಗುತ್ತಿಲ್ಲ. ಇವರು ಸುರಕ್ಷಿತವಾಗಿ ದೇಶಕ್ಕೆ ಮರಳಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಅಲ್ಲಿನ ಭಾರತೀಯ ದೂತವಾಸಗಳು ಮೀನುಗಾರರು ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲಾ ಭಾರತೀಯರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. 

SCROLL FOR NEXT