ದೇಶ

ನ್ಯಾಯಾಲಯಕ್ಕೂ ಅವರ ತಂತ್ರಗಾರಿಕೆ ತಿಳಿದಿದೆ, ನಾಳೆ ನಮಗೆ ನ್ಯಾಯದೊರೆಯಲಿದೆ: ನಿರ್ಭಯಾ ತಾಯಿ

Srinivasamurthy VN

ನವದೆಹಲಿ: ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿರ್ಭಯ ದೋಷಿಗಳು ಹೂಡುತ್ತಿರುವ ತಂತ್ರಗಾರಿಕೆ ನ್ಯಾಯಾಲಯದ ಗಮನಕ್ಕೂ ಬಂದಿದೆ. ಹೀಗಾಗಿ ನಾಳೆ ನಮಗೆ ನ್ಯಾಯ ದೊರೆಯಲಿದೆ ಎಂದು ನಿರ್ಭಾಯ ತಾಯಿ ಆಶಾದೇವಿ ಹೇಳಿದ್ದಾರೆ.

2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಪವನ್‌ ಕುಮಾರ್‌ ಗುಪ್ತಾ ಸಲ್ಲಿಸಿದ್ದ ಪರಿಹಾರಾತ್ಮಕ (ಕ್ಯುರೇಟಿವ್) ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಇದರ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಆಶಾದೇವಿ ಅವರು, ನಿರ್ಭಯಾ ದೋಷಿಗಳಿಗೆ ನ್ಯಾಯಾಲಯ ಎಲ್ಲ ರೀತಿಯ ಅವಕಾಶವನ್ನೂ ನೀಡಿತು. ಆದರೆ ದೋಷಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ಎಲ್ಲ ರೀತಿಯ ತಂತ್ರಗಾರಿಕೆ ಬಳಸಿದರು. ದೋಷಿಗಳ ಈ ತಂತ್ರಗಾರಿಕೆ ಇದೀಗ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ನಾಳೆ ನಮಗೆ ನ್ಯಾಯ ದೊರೆಯಲಿದೆ ಎಂದು ಹೇಳಿದ್ದಾರೆ.

SCROLL FOR NEXT