ಕನಿಕಾ 
ದೇಶ

ಕೊರೋನಾ ವೈರಸ್: ಗಾಯಕಿ ಕನಿಕಾ ರೋಗಿಯಂತೆ ವರ್ತಿಸಬೇಕೇ ವಿನಃ ಸ್ಟಾರ್ ರೀತಿಯಲ್ಲ- ಲಖನೌ ಆಸ್ಪತ್ರೆ

ಕೊರೋನಾ ವೈರಸ್ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ರೋಗಿಯಂತೆ ವರ್ತಿಸಬೇಕೇ ವಿನಃ ಸ್ಟಾರ್ ರೀತಿಯಲ್ಲ ಎಂದು ಲಖನೌ ಆಸ್ಪತ್ರೆ ತಿಳಿಸಿದೆ. 

ನವದೆಹಲಿ: ಕೊರೋನಾ ವೈರಸ್ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರು ರೋಗಿಯಂತೆ ವರ್ತಿಸಬೇಕೇ ವಿನಃ ಸ್ಟಾರ್ ರೀತಿಯಲ್ಲ ಎಂದು ಲಖನೌ ಆಸ್ಪತ್ರೆ ತಿಳಿಸಿದೆ. 

ಲಖನೌನ ಸಂಜಯ್ ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ಆರ್.ಕೆ.ಧೀಮನ್ ಮಾತನಾಡಿ, ಕನಿಕಾ ಅವರಿಗೆ ಆಸ್ಪತ್ರೆಯಿಂದ ಆಗುವ ಎಲ್ಲಾ ರೀತಿಯ ಉತ್ತಮ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಇದೀಗ ಕನಿಕಾ ಅವರು ರೋಗಿಯಂತೆಯೇ ವಿನಃ ಸ್ಟಾರ್ ರೀತಿ ವರ್ತಿಸಬಾರದು ಎಂದು ಹೇಳಿದ್ದಾರೆ. 

ಕನಿಕಾ ಅವರಿಗೆ ಯಾವುದೇ ಆಹಾರ ಪಥ್ಯವನ್ನೂ ಹೇಳಿಲ್ಲ. ಇದೀಗ ಅವರು ನಮಗೆ ಸಹಕಾರ ನೀಡಬೇಕಿದ್ದು, ರೋಗಿಯಂತೆ ನಡೆದುಕೊಳ್ಳಬೇಕಿದೆ. ಪ್ರತ್ಯೇಕ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯ, ಬೆಡ್, ಟಿವಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಶುಕ್ರವಾರವಷ್ಟೇ ಕನಿಕಾ ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು. ಲಂಡನ್'ಗೆ ತೆರಳಿದ್ದ ಕನಿಕಾ ಅವರು ಮಾರ್ಚ್ 15 ರಂದು ಭಾರತಕ್ಕೆ ಬಂದಿದ್ದರು. ಬಳಿಕ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ ಬಳಿಕ ವೈರಸ್ ಪತ್ತೆಯಾಗಿದ್ದು, ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel