ದೇಶ

ಲಕ್ಷಾಂತರ ಗುತ್ತಿಗೆ ನೌಕರರಿಗೆ ಸಂಪೂರ್ಣ ವೇತನ ಬಿಡುಗಡೆಗೆ ರೈಲ್ವೆ ಇಲಾಖೆ ನಿರ್ಧಾರ

Nagaraja AB

ನವದೆಹಲಿ: ಮಾರ್ಚ್ 31ರವರೆಗೂ ಎಲ್ಲಾ ರೀತಿಯ ಪ್ಯಾಸೆಂಜರ್ ಸೇವೆಯನ್ನು ರದ್ದುಗೊಳಿಸಿದ್ದರೂ ಲಕ್ಷಾಂತರ ಗುತ್ತಿಗೆ ನೌಕರರಿಗೆ ಪೂರ್ಣ ವೇತನ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ದೇಶಾದ್ಯಂತ ಕೊರೋನಾವೈರಸ್ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಲಕ್ಷಾಂತರ ಗುತ್ತಿಗೆ ನೌಕರರು ನಿಲ್ದಾಣದ ಹೌಸ್ ಕೀಪಿಂಗ್ ಸೇವೆ, ನೈರ್ಮಲ್ಯೀಕರಣ, ಪ್ಯಾಂಟ್ರಿ ಕಾರ್ , ಮತ್ತಿತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಮತ್ತೊಂದೆಡೆ ಕೆಲ ನೌಕರರು ಕಡಿಮೆ ಅವಧಿಯಲ್ಲಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಎಲ್ಲಾ ಗುತ್ತಿಗೆ ನೌಕರರಿಗೂ ಗರಿಷ್ಠ ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. 

ಯಾವುದೇ ರೀತಿಯ ಗುತ್ತಿಗೆ ನೌಕರರಿಗೆ ದೊಡ್ಡ ಮೊತ್ತದ ಪರಿಹಾರ ನೀಡಲಾಗಿದೆ. ರೈಲುಗಳ ಓಡಾಟ ಇಲ್ಲದಿದ್ದರೂ ಶೇಕಡಾ 100 ರಷ್ಟು ವೇತನವನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇವೆಯನ್ನು ನಿರ್ಬಂಧಿಸಿದ್ದರೂ ಸಹ ಮಾನವೀಯತೆ ಆಧಾರದ ಮೇಲೆ ಇವರೆಲ್ಲರಿಗೂ ಪೂರ್ಣ ವೇತನ ಬಿಡುಗಡೆ ಮಾಡುವಂತೆ ರೈಲ್ವೆ ಮಂಡಳಿ ವಲಯಗಳಿಗೆ ಸಲಹೆ ನೀಡಿದೆ. 

SCROLL FOR NEXT