ದೇಶ

ಮಾ.24 ರಂದು ಲಾಕ್ ಡೌನ್ ಘೋಷಣೆಯ ಮೋದಿ ಭಾಷಣಕ್ಕೆ ದಾಖಲೆಯ ಟಿಆರ್ ಪಿ! 

Srinivas Rao BV

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ದಾಖಲೆಯ ಟಿಆರ್ ಪಿ ಪಡೆದಿದೆ. 

ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್‌ಸಿ) ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ ಮಾ.24 ರಂದು ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣಕ್ಕೆ ಐಪಿಎಲ್ ವೀಕ್ಷಣೆಗಿಂಟಲೂ ಹೆಚ್ಚಿನ ವೀಕ್ಷಣೆ ದಾಖಲಾಗಿದ್ದು ಇತಿಹಾಸದಲ್ಲೇ ದಾಖಲೆಯ ಟಿಆರ್ ಪಿ ಬಂದಿದೆ. ಇದು ನೋಟು ನಿಷೇಧ, ಜನತಾ ಕರ್ಫ್ಯೂಗೆ ಕರೆ ನೀಡಿದಾಗ ಮಾಡಿದ ಭಾಷಣಕ್ಕಿಂತಲೂ ಹೆಚ್ಚಿನ ಜನರನ್ನು ತಲುಪಿದೆ. 

ಮಾ.24 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಬರೊಬ್ಬರಿ 201 ಚಾನಲ್ ಗಳು ವರದಿ ಮಾಡಿದ್ದು ದೇಶಾದ್ಯಂತ ಬರೊಬ್ಬರಿ 19.7 ಕೋಟಿ ಜನರು ವೀಕ್ಷಿಸಿದ್ದಾರೆ. (ಇದು ಐಪಿಎಲ್ ಫೈನಲ್ಸ್ ಗಿಂತಲೂ ಹೆಚ್ಚಿನ ವೀಕ್ಷಕರ ಸಂಖ್ಯೆ) ಎಂದು ಪ್ರಸಾರ ಭಾರತಿಯ ಸಿಇಒ ಶಶಿ ಶೇಖರ್ ಟ್ವೀಟ್ ಮಾಡಿದ್ದಾರೆ. 

13.3 ಕೋಟಿ ಜನರು ಐಪಿಎಲ್ ನ ಫೈನಲ್ಸ್ ಪಂದ್ಯವನ್ನು ವೀಕ್ಷಿಸಿದ್ದರೆ, ಮಾ.24 ರಂದು 19.7 ಕೋಟಿ ಜನರು ಮೋದಿ ಭಾಷಣವನ್ನು ವೀಕ್ಷಿಸಿದ್ದಾರೆ. ಮಾ.19 ರಂದು ಮಾಡಿದ್ದ ಮೋದಿ ಭಾಷಣವನ್ನು 8.30 ಕೋಟಿ ಜನರು ವೀಕ್ಷಿಸಿದ್ದರು, 191 ಚಾನಲ್ ಗಳು ಇದನ್ನು ಪ್ರಕಟಿಸಿದ್ದವು. 

2019 ರ ಆ.8 ರಂದು ಆರ್ಟಿಕಲ್ 370 ರದ್ದತಿ ಕುರಿತು ಮಾತನಾಡಿದ್ದ ಮೋದಿ ಭಾಷಣವನ್ನು 163 ಚಾನಲ್ ಗಳು ವರದಿ ಮಾಡಿ 6.5 ಕೋಟಿ ಜನರು ವೀಕ್ಷಿಸಿದ್ದರೆ, ನೋಟು ನಿಷೇಧದ ಘೋಷಣೆಯನ್ನು 114 ವಾಹಿನಿಗಳ ಮೂಲಕ 5.7 ಜನರು ವೀಕ್ಷಿಸಿದ್ದರು. ಲಾಕ್ ಡೌನ್ ಘೋಷಣೆಯಾದ ವಿಡಿಯೋಗೆ 3891 ಮಿಲಿಯನ್ ನಿಮಿಷಗಳ ವೀಕ್ಷಣೆ ದಾಖಲಾಗಿದೆ. 

SCROLL FOR NEXT