ದೇಶ

ಕೊರೋನಾ ಲಾಕ್'ಡೌನ್ ಎಫೆಕ್ಟ್: ಶಾಸಕರು, ನೌಕರರ ಶೇ.75ರಷ್ಚು ವೇತನಕ್ಕೆ ಕತ್ತರಿ ಹಾಕಿದ ತೆಲಂಗಾಣ ಸರ್ಕಾರ

Manjula VN

ಹೈದರಾಬಾದ್: ದೇಶದಾದ್ಯಂತ ಕೊರೋನಾ ಲಾಕ್ ಡೌನ್ ಬೆನ್ನಲ್ಲೇ, ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರೀ ಕಡಿತ ಮಾಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸರ್ಕಾರ ಘೋಷಣೆ ಮಾಡಿದೆ. 

ಪ್ರಗತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವ ತೆಲಂಗಾಣ ಸರ್ಕಾರಕೊರೋನಾ ಕರಿನೆರಳಿನ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ರೂ.12 ಸಾವಿರ ಕೋಟಿ ಖೋತಾ ಆಗಿದೆ. ಹೀಗಾಗಿ ನೌಕರರ ವೇತನ ಕತ್ತರಿಗೆ ನಿರ್ಧರಿಸಲಾಗಿದೆ ಎಂದು ಹೇಳಿದೆ. 

ಇದರನ್ವಯ, ಏಪ್ರಿಲ್ ತಿಂಗಳಿನಲ್ಲಿ ಸಿಎಂ, ಸಚಿರು, ಶಾಸಕರು, ಜನಪ್ರತಿನಿಧಿಗಳ ಶೇ.75ರಷ್ಟು ವೇತನ, ಐಎಎಸ್ ಅಧಿಕಾರಿಗಳ ಶೇ.60 ಇತರೆ ನೌಕರರ ಶೇ.50 ಹಾಗೂ ಡಿ ದರ್ಜೆ ಹಾಗೂ ಗುತ್ತಿಗೆ ನೌಕರರ ಶೇ.10ರಷ್ಟು ವೇತನವನ್ನು ಕಡಿತಗೊಳಿಸಲಾಗುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ. 

SCROLL FOR NEXT