ಸಾಂದರ್ಭಿಕ ಚಿತ್ರ 
ದೇಶ

ಮದ್ಯ ಸೇವನೆಯಿಂದ ಕೊರೊನಾ ಗಂಟಲಲ್ಲೇ ಸಾಯುತ್ತದೆ, ಮದ್ಯದಂಗಡಿ ತೆರೆಯಿರಿ: ಕಾಂಗ್ರೆಸ್‌ ಶಾಸಕ

ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನ ಸೋಂಕು ಹರಡದಂತೆ ತಪ್ಪಿಸಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ರಾಜಸ್ಥಾನದ ಕಾಂಗ್ರೆಸ್‌ನ ಶಾಸಕನೊಬ್ಬ ಮದ್ಯ ಸೇವನೆಯಿಂದ ಕೊರೊನಾ ವೈರಸ್‌ ಸಾಯುತ್ತೆ. ಹೀಗಾಗಿ ಮದ್ಯದಂಗಡಿ ಒಪನ್‌ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾನೆ.

ರಾಜಸ್ಥಾನ: ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನ ಸೋಂಕು ಹರಡದಂತೆ ತಪ್ಪಿಸಲು ದೇಶದಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ರಾಜಸ್ಥಾನದ ಕಾಂಗ್ರೆಸ್‌ನ ಶಾಸಕನೊಬ್ಬ ಮದ್ಯ ಸೇವನೆಯಿಂದ ಕೊರೊನಾ ವೈರಸ್‌ ಸಾಯುತ್ತೆ. ಹೀಗಾಗಿ ಮದ್ಯದಂಗಡಿ ಒಪನ್‌ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾನೆ. ಸದ್ಯ ಈತನ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜಸ್ಥಾನದ ಸಂಗೋಡ್‌ ಶಾಸಕ ಭರತ್‌ ಸಿಂಗ್ ಕುಂದಾನ್‌ಪುರ್‌ ಎಂಬವರು ಈ ಬಗ್ಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿದ್ದು ಮದ್ಯದಂಗಡಿ ತೆರೆಯಲು ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಆಲ್ಕೋಹಾಲ್ ಸ್ಯಾನಿಟೈಸರ್‌ನಿಂದ ಹ್ಯಾಂಡ್‌ವಾಶ್ ಮಾಡುವ ಮೂಲಕ ಕೊರೊನಾ ವೈರಸ್‌ ಸಾಯೋದಾದ್ರೆ. ಮದ್ಯ
ಸೇವನೆಯಿಂದಲೂ ಗಂಟಲಿನಲ್ಲಿರುವ ವೈರಸ್‌ಗಳು ಸಾಯುತ್ತದೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.

ಇನ್ನು ಅಕ್ರಮ ಮದ್ಯ ಮಾರಾಟದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿರುವ ಶಾಸಕ, ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಅದಕ್ಕೆ ಜನರು ಜಾಸ್ತಿ ಹಣ ನೀಡಿ ಖರೀದಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಮದ್ಯದಂಗಡಿ ತೆರೆಯೋಕೆ ಅನುಮತಿ ನೀಡುವಂತೆ ಶಾಸಕ ಭರತ್ ಸಿಂಗ್‌ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT