ದೇಶ

ಚೆನ್ನೈ: ಟ್ರಿಪ್ಲಿಕೇನ್ ಬೀದಿಯೊಂದರಲ್ಲೇ ದಾಖಲೆಯ 42 ಕೋವಿಡ್-19 ಪ್ರಕರಣಗಳು ಪತ್ತೆ

Nagaraja AB

ಚೆನ್ನೈ: ಉಪನಗರ ಟ್ರಿಪ್ಲಿಕೇನ್ ನಲ್ಲಿರುವ ಬೀದಿಯೊಂದರಲ್ಲೇ ದಾಖಲೆಯ 42 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.ವಿಆರ್ ಪಿಲೈ ಬೀದಿಯಲ್ಲಿ ಟಿ, ಕಾಫಿ ಮತ್ತಿತರ ಸ್ಯಾಕ್ಸ್ ವಿತರಿಸುತ್ತಿದ್ದ ಇಬ್ಬರ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ನಂತರ ಒಬ್ಬರಾದ ನಂತರ ಮತ್ತೊಬ್ಬರಿಗೆ ಎಂಬಂತೆ ವಿಆರ್  ಪಿಲೈ ಸ್ಟ್ರೀಟ್ ನ  42 ನಿವಾಸಿಗಳಲ್ಲಿಯೂ ಸೋಂಕು ಕಂಡುಬಂದಿದೆ.

ಸೋಂಕಿನ ಮೂಲವೆಂದು ಶಂಕಿಸಲಾಗಿರುವ ಎರಡು ಪ್ರಾಥಮಿಕ ಪ್ರಕರಣಗಳ ವ್ಯಕ್ತಿಗಳು 35 ಮತ್ತು 49 ವಯಸ್ಸಿನವರಾಗಿದ್ದು, ವಿಆರ್ ಪಿಲೈ ಸ್ಟ್ರೀಟ್ ನಿವಾಸಿಯಾಗಿದ್ದಾರೆ. ಬೇಯಿಸಿದ ಆಹಾರ ವಿತರಿಸುವುದನ್ನು ಪಾಲಿಕೆ ತಡೆಗಟ್ಟಿದ್ದರೂ ಇವರಿಬ್ಬರೂ ಒಟ್ಟಾಗಿ ಬೇಯಿಸಿದ ಆಹಾರವನ್ನು ವಿತರಿಸುತ್ತಿದ್ದರು ಎನ್ನಲಾಗಿದೆ 

ಇವರಿಬ್ಬರೂ ಹೇಗೆ ಸೋಂಕಿಗೆ ತುತ್ತಾದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅವರು ಚೆನ್ನೈ ನಗರದಲ್ಲಿ ಸ್ವಲ್ಪ ಅಡ್ಡಾಡಿರುವುದಾಗಿ ತಿಳಿಸಿದ್ದು, ಸದ್ಯ ಎಲ್ಲರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಕಾರ್ಪೋರೇಷನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಆರ್ ಪಿಲೈ ಸ್ಟ್ರೀಟ್ ಸೇರಿದಂತೆ ಚನ್ನೈನಲ್ಲಿ ಒಟ್ಟಾರೇ 231 ಕಂಟೈನ್ ಮೆಂಟ್ ಝೋನ್ ಗಳಿವೆ.  ಏಪ್ರಿಲ್ 27ರಿಂದಲೂ ವಿಆರ್ ಪಿಲೈ ಸ್ಟ್ರೀಟ್ ಪ್ರದೇಶವನ್ನು ಕಂಟೈನ್ ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ

SCROLL FOR NEXT