ಸಂಗ್ರಹ ಚಿತ್ರ 
ದೇಶ

ಚೆನ್ನೈ: ಅಮ್ಮ ಕ್ಯಾಂಟೀನ್, ಅವಿನ್ ಹಾಲು ಸಂಸ್ಥೆ ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ಪತ್ತೆ!

ಲಾಕ್'ಡೌನ್ ನಡುವಲ್ಲೂ ಪ್ರತೀನಿತ್ಯ ಬಡವರ ಹೊಟ್ಟೆ ತುಂಬಿಸುತ್ತಿದ್ದ ಅಮ್ಮ ಕ್ಯಾಂಟೀನ್ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಚೆನ್ನೈ: ಲಾಕ್'ಡೌನ್ ನಡುವಲ್ಲೂ ಪ್ರತೀನಿತ್ಯ ಬಡವರ ಹೊಟ್ಟೆ ತುಂಬಿಸುತ್ತಿದ್ದ ಅಮ್ಮ ಕ್ಯಾಂಟೀನ್ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಅಮ್ಮ ಕ್ಯಾಂಟೀನ್ ನಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 52 ವರ್ಷದ ಮಹಿಳೆಯೊಬ್ಬರಲ್ಲಿ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ. 

ಕಂಟೈನ್ಮೆಂಟ್ ಜೋನ್'ನಲ್ಲಿರುವ ತ್ರಿಪ್ಲಿಕೇನ್ನಲ್ಲಿರುವ ಅಮ್ಮ ಕ್ಯಾಂಟೀನ್ ನಲ್ಲಿ ಮಹಿಳೆ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗುತ್ತಿದೆ. 

ಭಾನುವಾರ ಸಂಜೆ ನಮಗೆ ಈ ಕುರಿತು ಸುದ್ದಿ ತಿಳಿಯಿತು. ಕೂಡಲೇ ಗಜಪತಿ ಲಾಲಾ ಬೀದಿಯಲ್ಲಿರುವ ಕ್ಯಾಂಟೀನ್'ನನ್ನು ಮುಚ್ಚಲಾಗಿತ್ತು. ಇದೀಗ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರನ್ನೂ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಇದಲ್ಲದೆ, ಮಧವರಂ ಪ್ರದೇಶದಲ್ಲಿರುವ ಅವಿನ್ ಹಾಲು ಸಂಸ್ಥೆಯ ಸಿಬ್ಬಂದಿಯೊಬ್ಬರಲ್ಲೂ ಕೂಡ ಕೊರೋನಾ ದೃಢಪಟ್ಟಿದೆ. 

ವೈರಸ್ ದೃಢಪಟ್ಟಿದ್ದರೂ ಕೂಡ ಎಂದಿನಂತೆ ತಮ್ಮ ಕಾರ್ಯಗಳನ್ನು ಮುಂದುವರೆಸುವುದಾಗಿ ಅವಿನ್ ಸಂಸ್ಥೆಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಸಿಬ್ಬಂದಿಯಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದ್ದಂತೆಯೇ ಇದರೆ ನೌಕರರು ಆ ಪ್ರದೇಶಕ್ಕೆ ತೆರಳುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ತಮಿಳುನಾಡಿನಲ್ಲಿ ಅಧಿಕಾರ ಯಾರಿಗೆ? ಡಿಎಂಕೆ, ಎನ್‌ಡಿಎ ಅಥವಾ ಟಿವಿಕೆ? ಸಮೀಕ್ಷೆಗಳಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ!

ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತದ ರಕ್ಷಣಾ ರಫ್ತು ಇತಿಹಾಸದಲ್ಲೇ ದಾಖಲೆಯ ಏರಿಕೆ!, ಖರೀದಿದಾರರು ಯಾರು?

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

SCROLL FOR NEXT