ದೇಶ

ಕೊರೋನಾ ನಿಯಂತ್ರಣಕ್ಕೆ ಪಿಎಂ-ಕೇರ್ಸ್ ನಿಂದ 3,100 ಕೋಟಿ ರೂ. ಬಿಡುಗಡೆ

Srinivas Rao BV

ನವದೆಹಲಿ: ಕೊರೋನಾ ವಿರುದ್ಧದ ಹೋರಾಟ, ವೈರಾಣು ನಿಯಂತ್ರಣಕ್ಕೆ ಪಿಎಂ-ಕೇರ್ಸ್ ನಿಂದ 3,100 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. 

ಈಗ ಘೋಷಣೆ ಮಾಡಲಾಗಿರುವ ಹಣವನ್ನು ವೆಂಟಿಲೇಟರ್ ಖರೀದಿ, ವಲಸಿಗ ಕಾರ್ಮಿಕರ ಸುರಕ್ಷತೆಗೆ ಬಳಕೆ ಮಾಡಲಾಗುತ್ತದೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಹೇಳಿದೆ. 

3,100 ಕೋಟಿ ರೂಪಾಯಿಗಳ ಪೈಕಿ 2,000 ಕೋಟಿಗೂ ಹೆಚ್ಚಿನ ಮೊತ್ತವನ್ನು ದೇಶಿ ನಿರ್ಮಿತ ಭಾರತದಲ್ಲೇ ತಯಾರುಮಾಡಿದಂತಹ ವೆಂಟಿಲೇಟರ್ ಗಳ ಖರೀದಿಗೆ ಬಳಕೆ ಮಾಡಲಾಗುತ್ತದೆ. ಉಳಿದ 1,000 ಕೋಟಿ ರೂಪಾಯಿ ಮೊತ್ತವನ್ನು ವಲಸಿಗ ಕಾರ್ಮಿಕರಿಗಾಗಿ ವಿನಿಯೋಗಿಸಲಾಗುತ್ತದೆ, ಉಳಿದ 100 ಕೋಟಿ ರೂಪಾಯಿಗಳನ್ನು ಕೊರೋನಾ ಲಸಿಕೆ ಕಂಡುಹಿಡಿಯುವುದಕ್ಕಾಗಿ ಮೀಸಲಿರಿಸಲಾಗಿದೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೂ ವೆಂಟಿಲೇಟರ್ ಗಳನ್ನು ಒದಗಿಸಲಾಗುವುದು ಎಂದು ಪಿಎಂಒ ತಿಳಿಸಿದೆ. 

ಕೊರೋನಾ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ದೇಣಿಗೆ ನೀಡಲು ಇಚ್ಛಿಸುವ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮಾ.27 ರಂದು ಪಿಎಂ ಕೇರ್ಸ್ ನ್ನು ಪ್ರಾರಂಭಿಸಿದ್ದರು.  ಕಡಿಮೆ ವೆಚ್ಚದ ಪರಿಣಾಮಕಾರಿ ವೆಂಟಿಲೇಟರ್ ಗಳನ್ನು ತಯಾರಿಸುವುದಕ್ಕಾಗಿ ಕಲಿಕೆ ಹಾಗೂ ಡಿಫೆನ್ಸ್ ಸಂಸ್ಥೆಗಳು ಮುಂದೆ ಬಂದಿವೆ.

SCROLL FOR NEXT