ನವದೆಹಲಿ: ತಮ್ಮ ಊರುಗಳಿಗೆ ಹಿಂತಿರುಗಲು ಬಯಸುವ ವಲಸೆ ಕಾರ್ಮಿಕರ ಸಂಖ್ಯೆ ಇದೀಗ ದಿನದಿನಕ್ಕೆ ದೊಡ್ಡದಾಗುತ್ತಿದೆ. ವಲಸೆ ಕಾರ್ಮಿಕರ ಈ ಸಮಸ್ಯೆ ಪರಿಹಾರಕ್ಕಾಗಿ ಸ್ಪೈಸ್ ಜೆಟ್ ಸರ್ಕಾರಕ್ಕೆ ಒಂದು ಆಫರ್ ನೀಡಿತ್ತು. ಅದೆಂದರೆ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ತಮ್ಮ ಸಾಂಸ್ಥೆ ವಿಮಾನ ಹಾರಾಟ ನಡೆಸುವುದಾಗಿ ಹೇಳಿತ್ತು. ಆದರೆ ಸಂಸ್ಥೆಯ ಈ ಪ್ರಸ್ತಾವಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸ್ಪೈಸ್ ಜೆಟ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಈ ವಿಚಾರ ಬಹಿರಂಗಪಡಿಸಿದ್ದು "ನಾವು ಬಹಳ ಹಿಂದೆಯೇ ನಮ್ಮ ಕಡೆಯಿಂದ ಈ ಆಫರ್ ನೀಡಿದ್ದೆವು. ನಾವು ಅವರಿಗೆ ಹೇಳಿದ್ದು, 5-6 ದಿನಗಳ ಬಸ್ ಪ್ರಯಾಣದ ವೇಳೆ ಜನರನ್ನು ಸೋಂಕಿಗೆ ಗುರಿಯಾಗುವಂತೆ ಅವರ ಊರು ತಲುಪಿಸುವುದು ಆಗಿತ್ತು. ಏಕೆಂದರೆ ಐದಾರು ದಿನಗಳ ಬಸ್ ಪ್ರಯಾಣಕ್ಕಿಂತ ಎರಡೂವರೆ ಗಂಟೆಗಳ ವಿಮಾನ ಪ್ರಯಾಣ ಅನುಕೂಲವಾಗಿತ್ತು. ಸುಮಾರು "600-700 ವಿಮಾನಗಳನ್ನು ಸಂಚಾರಕ್ಕೆ ನೀಡಲು ನಾವು ಅನುಮತಿಸಿದ್ದೆವು.ಈ ಮೂಲಕ ವಲಸೆ ಕಾರ್ಮಿಕನ್ನು ಸುಗಮವಾಗಿ, ವೇಗವಾಗಿ ಸಾಗಿಸಲು ಅನುಕೂಲಆಗಲಿದೆ. ಇದಕ್ಕೆ ಸರ್ಕಾರ ನೆರವಾಗಲಿದೆ ಎಂದು ನಾನು ನಂಬಿದ್ದೇನೆ.
"ಸರ್ಕಾರವು ಅವರ ಪ್ರಸ್ತಾಪದ ಮೇರೆಗೆ ಮುಂದಿನ ಕ್ರಮ ಕೈಗೆತ್ತಿಕೊಂಡರೆ ಒಂದು ವಿಮಾನವು ಸುಲಭವಾಗಿ 1000 ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ ಒಂದು ದಿನದಲ್ಲಿ. ನಾವು 5 ಲಕ್ಷ ಜನರನ್ನು ಸಾಗಿಸಬಹುದಾಗಿತ್ತು." ಅವರು ಹೇಳಿದ್ದಾರೆ.
ಸೀಮಿತ ಸ್ಥಳಾವಕಾಶ, ಹಣದ ಅವಶ್ಯಕತೆ ಮತ್ತು ಗಾಳಿಯ ಪ್ರಸಾರ ನಿರ್ಬಂಧದ ಕಾರಣ ವಿಮಾನ ಪ್ರಯಾಣವು ಸಾಕಷ್ಟು ಸುರಕ್ಷಿತವಾಗಿಲ್ಲ ಎಂಬ ಆತಂಕದಿಂಡಾಗಿ ಸರ್ಕಾರ ಮೌನ ವಹಿಸಿದೆ ಎನ್ನಲಾಗಿದೆ. ಆದರೆ ಸಿಂಗ್ ಹೇಳುವಂತೆ ವಿಮಾನದಲ್ಲಿ ಎಸಿ ಮೂಲಕ ಪ್ರಸಾರವಾಗುವ ಗಾಳಿ ಶುದ್ಧವಾಗಿರಲಿದೆ. ಈ ನಡುವೆ ದೇಶೀ ವಿಮಾನಯಾನವು ಒಂದು ವಾರದಲ್ಲಿ (ಮೇ 22) ಹಂತಹಂತವಾಗಿ ಪ್ರಾರಂಭವಾಗಲಿದೆ ಎಂದು ಅವರು ಅಂದಾಜಿಸಿದ್ದಾರೆ ಅಂತರರಾಷ್ಟ್ರೀಯ ಪ್ರಯಾಣವು ಕೆಲವು ತಿಂಗಳುಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದೆಂದು ಅವರು ಹೇಳಿದ್ದಾರೆ.
ಸರ್ಕಾರಕ್ಕೆ ಈ ಪ್ರಸ್ತಾಪವನ್ನು ಇನ್ನೊಮ್ಮೆ ಸಲ್ಲಿಸುತ್ತೀರಾ ಎಂದು ಕೇಳಲಾಗಿ "ಹಾಗೆ ಮಾಡಲು ಇಚ್ಚಿಸುವುದಿಲ್ಲ, ಪ್ರಸ್ತಾಪವು ಯಾವುದೇ ರೀತಿಯ ಬೆಳವಣಿಗೆ ಕಾಣದೆ ತಟಸ್ಥವಾಗಿ ನಿಂತಿದೆ" ಎಂದಿದ್ದಾರೆ.