ದೇಶ

ಲಡಾಕ್ ಗಡಿಯಲ್ಲಿ ಭಾರತ, ಚೀನಾ ದೇಶಗಳಿಂದ ಸೇನೆ ನಿಯೋಜನೆ, ಉದ್ವಿಗ್ನ ವಾತಾವರಣ ನಿರ್ಮಾಣ

Sumana Upadhyaya

ನವದೆಹಲಿ: ಹೊಸ ಕೇಂದ್ರಾಡಳಿತ ಪ್ರದೇಶ ಲಡಾಕ್ ನ ಪ್ಯಾಂಗೊಂಗ್ ತ್ಸೋ ಸರೋವರ ಮತ್ತು ಗಾಲ್ವಾನ್ ಕಣಿವೆ ಪ್ರದೇಶಗಳಲ್ಲಿ ಭಾರತ ಮತ್ತು ಚೀನಾ ದೇಶಗಳು ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಿದ್ದು ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಚೀನಾ ಸೈನ್ಯದ ಆಕ್ರಮಣಕಾರಿ ನಡವಳಿಕೆಯು ಚೀನಾ ಒಡ್ಡಿದ ಬೆದರಿಕೆ ನೆನಪನ್ನು ಮರುಕಳಿಸುತ್ತದೆ ಎಂದು ಅಮೆರಿಕಾ ಹೇಳಿದ್ದು ಈ ಸಂದರ್ಭದಲ್ಲಿ ಭಾರತದ ಉನ್ನತ ಮಿಲಿಟರಿ ಸೇನೆ ಅಲ್ಲಿನ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ.

ಗಡಿಯಲ್ಲಿನ ಭುಗಿಲೆದ್ದಿರುವಿಕೆಗಳು, ಚೀನಾದ ಆಕ್ರಮಣವು ಯಾವಾಗಲೂ ಕೇವಲ ವಾಕ್ಚಾತುರ್ಯವಲ್ಲ ಎಂಬುದನ್ನು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆ, ಅದು ದಕ್ಷಿಣ ಚೀನಾ ಸಮುದ್ರದಲ್ಲಿರಲಿ ಅಥವಾ ಅದು ಭಾರತದ ಗಡಿಯಲ್ಲಿದ್ದರೂ, ನಾವು ಚೀನಾ ದೇಶದ ಪ್ರಚೋದನೆ ಮತ್ತು ಗೊಂದಲದ ನಡವಳಿಕೆಯನ್ನು ಗಮನಿಸುತ್ತಲೇ ಇದ್ದೇವೆ ಎಂದು ಅಮೆರಿಕಾದ ದಕ್ಷಿಣ ಮತ್ತು ಕೇಂದ್ರ ಏಷ್ಯಾ ವಲಯ ಮುಖ್ಯಸ್ಥ ಆಲಿಸ್ ವೆಲ್ಸ್ ಹೇಳಿದ್ದಾರೆ.

ಪ್ಯಾಂಗೊಂಗ್ ತ್ಸೋ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುವರಿ ದೋಣಿಗಳನ್ನು ಚೀನಾ ನಿಯೋಜಿಸಿದೆ ಎಂದು ಹೇಳಲಾಗುತ್ತಿದ್ದು , ಭಾರತ ಮತ್ತು ಚೀನಾ ಮಧ್ಯೆ ಕಳೆದ 6 ದಶಕಗಳಿಂದ ಗಲ್ವಾನ್ ಪಾಯಿಂಟ್ ನಲ್ಲಿ ಕಿತ್ತಾಟ ನಡೆಯುತ್ತಲೇ ಇದೆ.

SCROLL FOR NEXT