ದೇಶ

ವಿದೇಶದಿಂದ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ವಾಪಸ್ ಕರೆತರಲು ವಂದೇ ಭಾರತ್ ಮಿಷನ್ ವಿಸ್ತರಣೆ

Nagaraja AB

ನವದೆಹಲಿ: ಎರಡನೇ ಹಂತದ ವಂದೇ ಭಾರತ್ ಮಿಷನ್ ಅಡಿಯಲ್ಲಿ 60 ರಾಷ್ಟ್ರಗಳಲ್ಲಿ ಸಿಲುಕಿರುವ ಸುಮಾರು 1 ಲಕ್ಷ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ತರಲು ಕೇಂದ್ರಸರ್ಕಾರ ಯೋಜನೆ ಹಾಕಿಕೊಂಡಿದೆ  ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಎರಡನೇ ಹಂತದ ಮಿಷನ್ ಮೇ 22ಕ್ಕೆ ಅಂತ್ಯವಾಗಿದೆ. ಆದಾಗ್ಯೂ, ಇದನ್ನು ಜೂನ್ 13ರವೆರೆಗೂ ಕೇಂದ್ರ ಸರ್ಕಾರ ವಿಸ್ತರಿಸಿದೆ.ಈ ಬೃಹತ್ ಸ್ಥಳಾಂತರ ಪ್ರಕ್ರಿಯೆಗಾಗಿ ತೊಡಗಿಸಿಕೊಳ್ಳುವ ಸಚಿವಾಲಯಗಳು ಮತ್ತು ಎಲ್ಲಾ ಏಜೆನ್ಸಿಗಳೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್  ಮಂಗಳವಾರ ಸಭೆ ನಡೆಸಿದ್ದಾರೆ.

ಈ ಸಂಬಂಧ ಸರಣಿ ಟ್ವಿಟ್ ಗಳನ್ನು ಪ್ರಕಟಿಸಿರುವ ಎಸ್. ಜೈಶಂಕರ್,  ಎರಡನೇ ಹಂತದಲ್ಲಿ 60 ರಾಷ್ಟ್ರಗಳಿಂದ 1 ಲಕ್ಷ ಪ್ರಯಾಣಿಕರನ್ನು ಸ್ವದೇಶಕ್ಕೆ ಕರೆತರುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. 

SCROLL FOR NEXT