ಹಣಕಾಸು ಆಯೋಗದ ವರದಿ ಸಲ್ಲಿಕೆ 
ದೇಶ

ರಾಷ್ಟ್ರಪತಿಗೆ ಹಣಕಾಸು ಆಯೋಗದ ವರದಿ ಸಲ್ಲಿಕೆ

2021-22 ರಿಂದ 2025-26ರ ವರೆಗಿನ ಅವಧಿಯ ‘ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ’ ಶೀರ್ಷಿಕೆಯ ಆಯೋಗದ ವರದಿಯನ್ನು ಹಣಕಾಸು ಆಯೋಗದ ಅಧ್ಯಕ್ಷ ಎನ್‍ ಕೆ ಸಿಂಗ್‍ ಸೋಮವಾರ ರಾಷ್ಟ್ರಪತಿ ರಾಮ್‍ನಾಥ್‍ ಕೋವಿಂದ್ ಅವರಿಗೆ ಸಲ್ಲಿಸಿದರು.

ನವದೆಹಲಿ: 2021-22 ರಿಂದ 2025-26ರ ವರೆಗಿನ ಅವಧಿಯ ‘ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ’ ಶೀರ್ಷಿಕೆಯ ಆಯೋಗದ ವರದಿಯನ್ನು ಹಣಕಾಸು ಆಯೋಗದ ಅಧ್ಯಕ್ಷ ಎನ್‍ ಕೆ ಸಿಂಗ್‍ ಸೋಮವಾರ ರಾಷ್ಟ್ರಪತಿ ರಾಮ್‍ನಾಥ್‍ ಕೋವಿಂದ್ ಅವರಿಗೆ ಸಲ್ಲಿಸಿದರು.

ಆಯೋಗದ ಸದಸ್ಯರಾದ ಅಜಯ್ ನಾರಾಯಣ್ ಜಾ, ಪ್ರೊಫೆಸರ್ ಅನೂಪ್ ಸಿಂಗ್, ಡಾ.ಅಶೋಕ್ ಲಾಹಿರಿ ಮತ್ತು ಡಾ.ರಮೇಶ್ ಚಂದ್, ಆಯೋಗದ ಕಾರ್ಯದರ್ಶಿ ಅರವಿಂದ್ ಮೆಹ್ತಾ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 2021-22 ರಿಂದ 2025-26 ವರೆಗೆ ಐದು ವರ್ಷಗಳವರೆಗಿನ ಅವಧಿಗೆ ಶಿಫಾರಸ್ಸುಗಳನ್ನು  ಅ 30 ರೊಳಗೆ ನೀಡಲು ಆಯೋಗಕ್ಕೆ ಆದೇಶಿಸಲಾಗಿತ್ತು.

ಕಳೆದ ವರ್ಷ, ಆಯೋಗ ಸಲ್ಲಿಸಿದ್ದ 2020-21ನೇ ಸಾಲಿನ ಶಿಫಾರಸುಗಳನ್ನು ಒಳಗೊಂಡ ತನ್ನ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿತ್ತು. ವರದಿಯನ್ನು 2020 ರ ಜ 30 ರಂದು ಸಂಸತ್ತಿನಲ್ಲಿ ಮಂಡಿಸಿತ್ತು. ವಿಶಿಷ್ಟ ಮತ್ತು ವ್ಯಾಪಕ ವಿಷಯಗಳ ಕುರಿತು ತನ್ನ ಶಿಫಾರಸುಗಳನ್ನು ನೀಡುವಂತೆ ಆಯೋಗಕ್ಕೆ ಸರ್ಕಾರ  ಸೂಚಿಸಿತ್ತು. ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರದ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ಕ್ಷೇತ್ರ, ನೇರ ಹಣ ವರ್ಗಾವಣೆ ಅಳವಡಿಸಿಕೊಳ್ಳುವುದು, ಘನತ್ಯಾಜ್ಯ ನಿರ್ವಹಣೆ ಮುಂತಾದ ಹಲವು ಕ್ಷೇತ್ರಗಳಲ್ಲಿ ರಾಜ್ಯಗಳ ಕಾರ್ಯಕ್ಷಮತೆ ಪ್ರೋತ್ಸಾಹಿಸುವ ಕುರಿತು ಶಿಫಾರಸು  ಮಾಡುವಂತೆಯೂ ಆಯೋಗಕ್ಕೆ ಸೂಚಿಸಲಾಗಿತ್ತು. ರಕ್ಷಣಾ ಮತ್ತು ಆಂತರಿಕ ಭದ್ರತೆಗೆ ನಿಧಿ ಒದಗಿಸಲು ಪ್ರತ್ಯೇಕ ಕಾರ್ಯವಿಧಾನವನ್ನು ಸ್ಥಾಪಿಸಬೇಕೇ ಎಂಬ ಕುರಿತು ಪರಿಶೀಲಿಸಲು ಆಯೋಗವನ್ನು ಕೇಳಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಸತ್ ಚಳಿಗಾಲದ ಅಧಿವೇಶನ: SIR ಬಗ್ಗೆ ಚರ್ಚೆಗೆ ವಿಪಕ್ಷಗಳ ಪ್ರತಿಭಟನೆ, ಗದ್ದಲ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

'ಅದು ನನಗೂ ಸಿಎಂ ಗೂ ಸಂಬಂಧಪಟ್ಟ ವಿಚಾರ, ನಾವಿಬ್ರೂ ಬ್ರದರ್ಸ್ ರೀತಿ ಇದ್ದೇವೆ': ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ಬಗ್ಗೆ ಡಿ.ಕೆ ಶಿವಕುಮಾರ್; Video

ಇಶಾ ಯೋಗ ಕೇಂದ್ರದಲ್ಲಿ ರಾಜ್ ನಿಡಿಮೋರು ಜೊತೆ ಎರಡನೇ ಮದುವೆಯಾದ ನಟಿ ಸಮಂತಾ ರುತ್ ಪ್ರಭು!

ಸಂಸತ್ ಚಳಿಗಾಲದ ಅಧಿವೇಶನ: ಸೋಲಿನ ಭೀತಿ ಚರ್ಚೆಗೆ ಕಾರಣವಾಗಬಾರದು- ವಿಪಕ್ಷಗಳಿಗೆ ಪ್ರಧಾನಿ ಮೋದಿ ಒತ್ತಾಯ

'ಈ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಇಚ್ಛಾಶಕ್ತಿಯೇ ದೊಡ್ಡ ಸಂಪತ್ತು': ಅಂಧ ಕ್ರಿಕೆಟ್ ಆಟಗಾರ್ತಿಯ ಯಶೋಗಾಥೆ!

SCROLL FOR NEXT