ದೇಶ

ರಾಹುಲ್ ಗಾಂಧಿ ಬಗ್ಗೆ ಆತ್ಮಚರಿತ್ರೆಯಲ್ಲಿ ಉಲ್ಲೇಖ: ಬರಾಕ್ ಒಬಾಮಾ ವಿರುದ್ಧ ರಾವತ್ ಕಿಡಿ

Nagaraja AB

ನವದೆಹಲಿ: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ನೂತನ ಆತ್ಮಚರಿತ್ರೆ ಪುಸ್ತಕದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಉಲ್ಲೇಖಿಸಿರುವುದರ ವಿರುದ್ಧ ಶಿವಸೇನಾ ಮುಖಂಡ ಸಂಜಯ್ ರಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂತಹ ಟೀಕೆ ಮಾಡಲು ಭಾರತದ ಬಗ್ಗೆ ಅವರಿಗೆ ಏನು ಗೊತ್ತು ಎಂದಿದ್ದಾರೆ.

ಭಾರತದ ರಾಜಕಾರಣಿಗಳು ಟ್ರಂಪ್ ಹುಚ್ಚ ಎಂದು ಹೇಳುವುದಿಲ್ಲ ಎಂದು ಹೇಳಿದ ಸಂಜಯ್ ರಾವತ್, ಒಬಮಾ ಅವರ ಹೇಳಿಕೆ ಅಸಹ್ಯಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿದೇಶಿ ರಾಜಕಾರಣಿ ಭಾರತದಲ್ಲಿನ ರಾಜಕೀಯ ಮುಖಂಡರಿಗೆ ಅಂತಹ ಹೇಳಿಕೆ ನೀಡಬಾರದು.ಇದೇ ವೇಳೆ ಅದರ ಬಗ್ಗೆ ದೇಶೀಯ ರಾಜಕೀಯ ನಾಯಕರು ಮಾಡುತ್ತಿರುವ ಟೀಕೆಗಳು ಅಸಹ್ಯಕರವಾಗಿವೆ. ಟ್ರಂಪ್ ಹುಚ್ಚ ಎಂದು ನಾವು ಹೇಳುವುದಿಲ್ಲ, ಈ ರಾಷ್ಟ್ರದ ಬಗ್ಗೆ ಒಬಾಮಾ ಅವರಿಗೆ ಎಷ್ಟು ಗೊತ್ತಿದೆ ಎಂದು ರಾವತ್ ಪ್ರಶ್ನಿಸಿದ್ದಾರೆ.

ಬರಾಕ್‌ ಒಬಾಮಾ ಅವರ ಆತ್ಮಚರಿತ್ರೆ Promised Land ನಲ್ಲಿ  ಭಾರತದ ಇಬ್ಬರು ರಾಜಕೀಯ ನಾಯಕರ ಹೆಸರು ಪ್ರಸ್ತಾಪವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಒಡನಾಟವನ್ನು ಒಬಾಮಾ ಸ್ಮರಿಸಿದ್ದಾರೆ.

ತಮ್ಮ ರಾಜಕೀಯ ಜೀವನದ ಘಟನಾವಳಿಗಳನ್ನು ನೆನಪಿಸಿಕೊಳ್ಳುವ ವೇಳೆ ಮನಮೋಹನ್ ಸಿಂಗ್ ಅವರನ್ನು ‘ಸಮಗ್ರತೆಯುಳ್ಳಿ ಪ್ರಭಾವಶಾಲಿ ವ್ಯಕ್ತಿ’ ಎಂದು ಒಬಾಮಾ ಬಣ್ಣಿಸಿದ್ದಾರೆ. ಆದ್ರೆ, ರಾಹುಲ್ ಗಾಂಧಿ ಅವರನ್ನು ‘ಪ್ರಭಾವಬೀರಲು ಉತ್ಸುಕನಾಗಿರುವ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.

SCROLL FOR NEXT