ದೇಶ

ಹಿಮಾಚಲ ಪ್ರದೇಶ: ವಾಹನ ಹಳ್ಳಕ್ಕೆ ಬಿದ್ದು 7 ಮಂದಿ ಸಾವು

Srinivasamurthy VN

ಮಂಡಿ: ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸೋಮವಾರ ಎಂಟು ಪ್ರಯಾಣಿಕರನ್ನು ಹೊತ್ತ ವಾಹನ ಹಳ್ಳಕ್ಕೆ ಬಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರು ಜನರು ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಇಬ್ಬರು ಗಾಯಾಳುಗಳ ಪೈಕಿ ಒಬ್ಬ ವ್ಯಕ್ತಿ ದಾರಿ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನತದೃಷ್ಟ ಮಹೀಂದ್ರಾ ಪಿಕಪ್ ವಾಹನ ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ಮಂಡಿ ಬಳಿಯ ಪುಲ್ಘ್ರಾಟ್ನಲ್ಲಿ ಯಲ್ಲಿ ಹಳ್ಳಕ್ಕೆ ಬಿದ್ದಿದೆ. ಪೊಲೀಸರು ಚಾಲಕನ ವಿರುದ್ಧ ನಿರ್ಲಕ್ಷ ಚಾಲನೆ ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT