ದೇಶ

ಅಕ್ರಮವಾಗಿ ಪಾಕ್ ಗಡಿ ಪ್ರವೇಶಿಸಿದ್ದ ಭಾರತೀಯ ನಾಗರಿಕನನ್ನು ಬಿಎಸ್ ಎಫ್ ಗೆ ಹಸ್ತಾಂತರಿಸಿದ ಪಾಕಿಸ್ತಾನ ಸೇನೆ

Srinivasamurthy VN

ಲಾಹೋರ್: ಅಕ್ರಮವಾಗಿ ಪಾಕ್ ಗಡಿ ಪ್ರವೇಶಿಸಿದ್ದ ಭಾರತೀಯ ನಾಗರಿಕನನ್ನು ಪಾಕಿಸ್ತಾನ ಸೇನಾಧಿಕಾರಿಗಳು ಭಾರತೀಯ ಸೇನೆಯ ಬಿಎಸ್ ಎಫ್ ಯೋಧರಿಗೆ ಹಸ್ತಾಂತರಿಸಿದ್ದಾರೆ.

2016ರಲ್ಲಿ ಆಕಸ್ಮಿಕವಾಗಿ ಭಾರತೀಯ ಗಡಿಯಿಂದ ಪಾಕಿಸ್ತಾನ ಗಡಿಯೊಳಗೆ ತೆರಳಿದ್ದ ವ್ಯಕ್ತಿಯನ್ನು ಪಾಕಿಸ್ತಾನ ಸೇನೆ ಬಂಧಿಸಿತ್ತು. ಬಳಿಕ ನಾಲ್ಕು ವರ್ಷಗಳ ಸೆರೆವಾಸದ ಬಳಿಕ ಇದೀಗ ವಾಘಾ ಗಡಿ ಮೂಲಕ ಸೇನೆಗೆ ಹಸ್ತಾಂತರಿಸಿದ್ದಾರೆ.

ಮೂಲಗಳ ಪ್ರಕಾರ ಕುಂದನ್ ಲಾಲ್ ಅವರ ಪುತ್ರ ಪನ್ವಾಸಿ ಲಾಲ್ ಎಂಬಾತ 2016ರ ಆಗಸ್ಟ್ ನಲ್ಲಿ ಸಂಜೋತಾ ಎಕ್ಸ್ ಪ್ರೆಸ್ ನಲ್ಲಿ ಲಾಹೋರ್ ರೈಲು ನಿಲ್ದಾಣಕ್ಕೆ ಆಗಮಸಿದ್ದ. ಈ ವೇಳೆ ಆತನನ್ನು ಪರಿಶೀಲಿಸಿದ್ದ ಅಧಿಕಾರಿಗಳು ಆತನ ಬಳಿ ಸೂಕ್ತ ದಾಖಲೆಗಳಿಲ್ಲದೇ ಇರುವುದರಿಂದ ಆತನನ್ನು ವಶಕ್ಕೆ ಪಡೆದಿದ್ದರು, ವಿಚಾರಣೆ ವೇಳೆ ಆತ ತನ್ನ ಹೆಸರು ಮೊಹಮದ್ ಅಸ್ಲಾಂ ಎಂದು ತಾನೋರ್ವ ಪಾಕಿಸ್ತಾನಿ ಎಂದು ಹೇಳಿಕೊಂಡಿದ್ದ,  ಬಂಧನದ ವೇಳೆ ಆತನದಿಂದ 500 ರೂ ಭಾರತೀಯ ಕರೆನ್ಸಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಆದರೆ ಬಳಿಕ ವಿಚಾರಣೆ ವೇಳೆ ಆತ ಭಾರತ ಮೂಲದವನು ಎಂದು ಬಹಿರಂಗವಾಗಿತ್ತು. 

ಹೀಗಾಗಿ ಬಳಿಕ ಪಾಕ್ ನ್ಯಾಯಾಲಯ ಆತನ್ನು ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದೀಗ ಜೈಲು ವಾಸ ಅಂತ್ಯವಾಗಿದ್ದು, ಪಂಜಾಬ್ ರೇಂಜರ್ಸ್ ಗಳ ಮೂಲಕ ಆತನನ್ನು ಇಂದು ಬಿಎಸ್ ಎಫ್ ಯೋಧರಿಗೆ ಪಾಕ್ ಸೇನೆ ಹಸ್ತಾಂತರಿಸಿದೆ.

SCROLL FOR NEXT