ದೇಶ

ಯುವತಿಯರನ್ನು ಹನಿಟ್ರ್ಯಾಪ್ ನಲ್ಲಿ ಸಿಲುಕಿಸಿ, ಬೆತ್ತಲೆ ಫೋಟೋಗಳೊಂದಿಗೆ ಬೆದರಿಕೆ ಹಾಕುತ್ತಿದ್ದ ಕಿರಾತಕನ ಬಂಧನ

Nagaraja AB

ಚೆನ್ನೈ: ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರನ್ನು ಅಕ್ರಮವಾಗಿ ಹನಿಟ್ರ್ಯಾಪ್ ನಲ್ಲಿ ಸಿಲುಕಿಸಿ, ಅವರ ಬೆತ್ತಲೆ ಫೋಟೋ ತೋರಿಸಿ ಬೆದರಿಕೆ ಹಾಕುತ್ತಿದ್ದ 25 ವರ್ಷದ ಯುವಕನೊಬ್ಬನನ್ನು ಇಲ್ಲಿನ ಅಡ್ಯರ್ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ಟೊಂಡಿಯಾರ್ಪೆಟ್ ನ ಅರುಣ್ ಕ್ರಿಸ್ಟೊಫರ್ ಬಂಧಿತ ಆರೋಪಿ. ಏರೋನಾಟಿಕಲ್ ಎಂಜಿನಿಯರಿಂಗ್ ಪದವೀಧರನಾಗಿರುವ ಈತ ಉತ್ತಮ ಕುಟುಂಬದಿಂದ ಬಂದಿದ್ದು, ಆತನ ಪೋಷಕರು ಸರ್ಕಾರಿ ನೌಕರರಾಗಿದ್ದಾರೆ. ಆತ ಇಂಧನ ಇಲಾಖೆಯಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗೆ ಚೆನ್ನೈನ ಯುವತಿಯೊಬ್ಬಳು ಅಡ್ಯರ್ ಸೈಬಲ್ ಘಟಕಕ್ಕೆ ಬಂದು ದೂರು ದಾಖಲಿಸಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಪರಿಚಿತನಾದ ಅರುಣ್ ನನ್ನು ಪ್ರೀತಿಸುತ್ತಿದ್ದೆ. ಆತನ ಸಂಪರ್ಕತತೆ ಹೆಚ್ಚಾಗುತ್ತಿದ್ದಂತೆ  ಬೆತ್ತಲೆ ಫೋಟೋಗಳನ್ನು ಪಡೆಯುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಸಬ್ ಇನ್ಸ್ ಪೆಕ್ಟರ್ ಮಹಾರಾಜನ್ ಹೇಳಿದ್ದಾರೆ.
  
ಯುವತಿಯರಿಗೆ ವಿಡಿಯೋ ಕಾಲ್ ಮಾಡುತ್ತಿದ್ದ ಅರುಣ್, ಬಟ್ಟೆ ಬಿಚ್ಚುವಂತೆ ಹೇಳುತ್ತಿದ್ದ.ನಂತರ ಅವರಿಗೆ ಗೊತ್ತಿಲ್ಲದಂತೆ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಸಂತ್ರಸ್ತೆಯ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಪಡೆದುಕೊಂಡು. ಸಂತ್ರಸ್ಥೆಯ ಖಾತೆಯಿಂದ ಇತರ ಕೆಲವು ಹುಡುಗಿಯರನ್ನು ಆಯ್ಕೆ ಮಾಡಿ, ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಬೇರೆ ಯುವತಿಯರ ಮೊಬೈಲ್ ಸಂಖ್ಯೆಯನ್ನು ಪಡೆದ ನಂತರ ಅರುಣ್, ಇದೇ ರೀತಿಯಲ್ಲಿ ಮಾತನಾಡಿ, ಹುಡುಗಿಯರನ್ನು ಬೀಳಿಸಿಕೊಳ್ಳುತ್ತಿದ್ದ. ಆತನ ಮೊಬೈಲ್ ಪರಿಶೀಲನೆ ನಡೆಸಿದಾಗ ನೂರಾರು ಯುವತಿಯರ ಅರೆಬೆತ್ತಲೆ ಫೋಟೋಗಳು ಮತ್ತು ವಿಡಿಯೋಗಳು ಕಂಡುಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ.

ಅರುಣ್ ವಿರುದ್ಧ ಐಟಿ ಕಾಯ್ದೆ ಮತ್ತು ಮಹಿಳೆಯರ ಮೇಲಿನ ಕಿರುಕುಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರ ಮೇಲೂ ನಂಬಿಕೆ ಇಡಬೇಡಿ. ಅನೇಕ ವಂಚಕರು ಹನಿಟ್ರ್ಯಾಪ್ ನಲ್ಲಿ ಸಿಲುಕಿಸುವ ಉದ್ದೇಶದಿಂದ ನಿಮ್ಮೊಂದಿಗೆ ಮಾತನಾಡುತ್ತಾರೆ. ಅಪರಿಚಿತರೊಂದಿಗೆ ವೈಯಕ್ತಿಕ ಫೋಟೋಗಳನ್ನು ಹಂಚಿಕೊಳ್ಳಬೇಡಿ ಎಂದು ಉಪ ಆಯುಕ್ತ ವಿ. ವಿಕ್ರಮನ್ ಯುವ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅರುಣ್ ನಿಂದ ಒಂದು ಲ್ಯಾಪ್ ಟಾಪ್ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ಪೊಲೀಸರು  ವಶಕ್ಕೆ ಪಡೆದುಕೊಂಡಿದ್ದು, ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ.

SCROLL FOR NEXT