ದೇಶ

ಲಿಬಿಯಾದಲ್ಲಿ 7 ಭಾರತೀಯರ ಅಪಹರಣ: ವಿದೇಶಾಂಗ ಸಚಿವಾಲಯ

Vishwanath S

ನವದೆಹಲಿ: ಲಿಬಿಯಾದಲ್ಲಿ ಏಳು ಮಂದಿ ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 

ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶದಕ್ಕೆ ಸೇರಿದ ಏಳು ಮಂದಿ ಕಳೆದ ತಿಂಗಳು ಅಪಹರಣಕ್ಕೀಡಾಗಿದ್ದಾರೆ. ಸದ್ಯ ಲಿಬಿಯಾ ಅಧಿಕಾರಿಗಳ ಜೊತೆ ಭಾರತ ಸರ್ಕಾರ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 

ಸೆಪ್ಟೆಂಬರ್ 14 ರಂದು ಭಾರತಕ್ಕೆ ವಿಮಾನ ಹಿಡಿಯಲು ಟ್ರಿಪೊಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಶ್ವೆರಿಫ್ ಎಂಬ ಸ್ಥಳದಲ್ಲಿ ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಸರ್ಕಾರವು ಅಪಹರಣಕ್ಕೀಡಾದವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ. ಇನ್ನು ಲಿಬಿಯಾದ ಅಧಿಕಾರಿಗಳು ಮತ್ತು ಉದ್ಯೋಗದಾತರೊಂದಿಗೆ ಸಮಾಲೋಚನೆ ಮತ್ತು ಸಮನ್ವಯದಲ್ಲಿದ್ದು ನಮ್ಮ ಭಾರತೀಯರನ್ನು ಪತ್ತೆಹಚ್ಚಲು ಮತ್ತು ಅವರ ಸೆರೆಯಿಂದ ಬೇಗನೆ ಬಿಡುಗಡೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದರು. 

ಭಾರತೀಯ ಪ್ರಜೆಗಳು ನಿರ್ಮಾಣ ಮತ್ತು ತೈಲ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಶ್ರೀವಾಸ್ತವ ಹೇಳಿದರು.

ಉತ್ತರ ಆಫ್ರಿಕಾದ ತೈಲ ಸಂಪದ್ಭರಿತ ದೇಶವಾದ ಲಿಬಿಯಾ 2011ರಲ್ಲಿ ಮುಅಮ್ಮರ್ ಗಡಾಫಿಯ ನಾಲ್ಕು ದಶಕಗಳ ಆಡಳಿತದ ಪತನದ ನಂತರ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಅಶಾಂತಿಗೆ ಸಾಕ್ಷಿಯಾಗಿದೆ.

SCROLL FOR NEXT