ದೇಶ

ಭೋಜ್‌ಪುರಿ ಹಾಡುಗಳಲ್ಲಿ 'ಅಶ್ಲೀಲತೆ' ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ: ನಟ-ಸಂಸದ ರವಿ ಕಿಶನ್

Vishwanath S

ಗೋರಖ್‌ಪುರ: ಭೋಜ್‌ಪುರಿ ಹಾಡುಗಳಲ್ಲಿ "ಅಶ್ಲೀಲತೆ" ಕುರಿತು ಸಂಸತ್ತಿನಲ್ಲಿ ಎತ್ತುತ್ತೇನೆ ಮತ್ತು ಅದರ ವಿರುದ್ಧ ಕಠಿಣ ಕಾನೂನು ತರುವಂತೆ ಒತ್ತಾಯಿಸುವುದಾಗಿ ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.

ಭೋಜ್‌ಪುರಿ ಭಾಷೆ 1,000 ವರ್ಷ ಹಳೆಯದು. ಇದನ್ನು ಕೋಟ್ಯಂತರ ಜನರು ಮಾತನಾಡುತ್ತಾರೆ. ಆದರೆ ಕೆಲವರು ಭೋಜ್‌ಪುರಿ ಹಾಡುಗಳಲ್ಲಿ "ಅಶ್ಲೀಲ" ಪದಗಳನ್ನು ಬಳಸಿ ಚಿತ್ರೀಕರಿಸುತ್ತಿದ್ದು ಭಾಷೆಯನ್ನು ಕಳಂಕಿತಗೊಳಿಸುತ್ತಿದ್ದಾರೆ ಎಂದು ನಟ ಹೇಳಿದ್ದಾರೆ.

"ನಾನು ಸಂಸತ್ತಿನಲ್ಲಿ ಭೋಜ್‌ಪುರಿ ಹಾಡುಗಳಲ್ಲಿ ಅಶ್ಲೀಲ ವಿಷಯವನ್ನು ಎತ್ತುತ್ತೇನೆ ಮತ್ತು ಭೋಜ್‌ಪುರಿ ಹಾಡುಗಳಲ್ಲಿ ಅಶ್ಲೀಲತೆಯ ವಿರುದ್ಧ ಕಠಿಣ ಕಾನೂನು ರೂಪಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಸಂಸದರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸಿನಿಮಾಗಳಿಗೆ, ವಿಶೇಷವಾಗಿ ಭೋಜ್‌ಪುರಿ ಭಾಷೆಗೆ ಸೆನ್ಸಾರ್ ಬೋರ್ಡ್ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು.

ಗೋರಖ್‌ಪುರ ಶೀಘ್ರದಲ್ಲೇ ಸಿನಿಮಾ ಶೂಟಿಂಗ್ ಹಬ್ ಆಗಲಿದೆ. "ಇದು ನಾನು ಮತ್ತು ಸಿಎಂ ಕಂಡ ಕನಸು ಮತ್ತು ಅದು ನನಸಾಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದರು. 

ಇನ್ನು ವಿಶೇಷವಾಗಿ ಭೋಜ್‌ಪುರಿ ಸಿನೆಮಾದಂತಹ ಪ್ರಾದೇಶಿಕ ಸಿನೆಮಾಗಳಿಗೆ. ವೆಬ್ ಸರಣಿಯ ಕಂತುಗಳನ್ನು ಇಲ್ಲಿ ಚಿತ್ರೀಕರಿಸಲಾಗುವುದು. ನಗರದಲ್ಲಿ ಚಿತ್ರೀಕರಿಸಿದ ಕಂತುಗಳಲ್ಲಿ ಎಲ್ಲಾ ಕಲಾವಿದರು ಪೂರ್ವಾಂಚಲ್ ಆಗಿರುತ್ತಾರೆ ಎಂದು ಅವರು ಹೇಳಿದರು.

SCROLL FOR NEXT