ದೇಶ

ಭಾರತದ ಜಿಡಿಪಿ ಹಿಂದಿಕ್ಕಲಿರುವ ಬಾಂಗ್ಲಾದೇಶ: ಮೋದಿ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

Vishwanath S

ನವದೆಹಲಿ: ನೆರೆಯ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ತಲಾ ಜಿಡಿಯ ಮಟ್ಟಕ್ಕೆ ತಲುಪುತ್ತಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ವರದಿಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ಆರು ವರ್ಷಗಳ ಬಿಜೆಪಿ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಣಾಮವಾಗಿ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲು ಸಿದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವಿಶ್ವ ಆರ್ಥಿಕ ದೃಷ್ಟಿಕೋನದ ವರದಿಯನ್ನು ಉಲ್ಲೇಖಿಸಿ ರಾಹುಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ಪ್ರಮಾಣಕ್ಕೆ ತಲುಪುತ್ತಿರುವುದನ್ನು ಸೂಚಿಸುವ ಗ್ರಾಫ್ ಅನ್ನು ಪೋಸ್ಟ್ ಮಾಡಿದ್ದಾರೆ. 

ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ತೀವ್ರವಾಗಿ ಹಾನಿಗೊಳಗಾದ ಭಾರತೀಯ ಆರ್ಥಿಕತೆಯು ಈ ವರ್ಷ ಶೇಕಡಾ 10.3 ರಷ್ಟು ಕುಸಿಯುವ ನಿರೀಕ್ಷೆಯಿದೆ ಎಂದು ಐಎಂಎಫ್ ಮಂಗಳವಾರ ಹೇಳಿತ್ತು.

ಆದರೆ, ಭಾರತವು 2021ರಲ್ಲಿ ಶೇಕಡಾ 8.8 ರಷ್ಟು ಬೆಳವಣಿಗೆಯ ದರವನ್ನು ಹಿಮ್ಮೆಟ್ಟಿಸುವ ಸಾಧ್ಯತೆಯಿದ್ದು, ತಮ್ಮ ಆರ್ಥಿಕತೆಯ ಸ್ಥಾನವನ್ನು ಮರಳಿ ಪಡೆಯುತ್ತದೆ. ಇದು ಚೀನಾದ ನಿರೀಕ್ಷಿತ ಬೆಳವಣಿಗೆಯ ದರವನ್ನು ಶೇ.8.2 ಅನ್ನು ಮೀರಿಸುತ್ತದೆ ಎಂದು ಐಎಂಎಫ್ ತನ್ನ ಇತ್ತೀಚಿನ 'ವಿಶ್ವ ಆರ್ಥಿಕ' ಔಟ್ ಲುಕ್ ವರದಿಯಲ್ಲಿ ತಿಳಿಸಿದೆ.

SCROLL FOR NEXT