ದೇಶ

ಹಾನಿ ಮಾಡುವ ಮುನ್ನ ಟಿವಿ  ಸುದ್ದಿಗಳನ್ನು ಪರಿಶೀಲಿಸುವ ವ್ಯವಸ್ಥೆ ಇದೆಯೇ? ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್

Nagaraja AB

ಮುಂಬೈ: ಹಾನಿ ಮಾಡುವ ಮುನ್ನ ಸುದ್ದಿ ವಾಹಿನಿಗಳು ಪ್ರಸಾರ ಮಾಡುವ ವಿಷಯವನ್ನು ಪರಿಶೀಲಿಸಲು ಏನಾದರೂ ವ್ಯವಸ್ಥೆ ಇದೆಯೇ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರವನ್ನು ಕೇಳಿದೆ.

ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸುದ್ದಿ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಧ್ಯಮಗಳು ಗಡಿ ದಾಟಿದರೆ,ಶಾಸಕಾಂಗ ಕ್ರಮ ಕೈಗೊಳ್ಳಬೇಕು, ಅದನ್ನು ನ್ಯಾಯಾಲಯ ಏಕೆ ಮಾಡಬೇಕು ಎಂದು ಹೇಳಿತು.

ಹಲವು ಮಾಜಿ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಅರ್ಜಿದಾರರು, ರಜಪೂತ್ ಪ್ರಕರಣದಲ್ಲಿ ಮಾಧ್ಯಮಗಳು ವಿಚಾರಣೆ ನಡೆಸುತ್ತಿವೆ ಅದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಒಂದು ವೇಳೆ ಏನಾದರೂ ಸಂಭವಿಸಿದರೆ ತೆಗೆದುಹಾಕುವುದಕ್ಕೆ ಎಲ್ಲಾ ಸಾರ್ವಜನಿಕ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ಖಾಸಗಿ ಉದ್ಯೋಗಿಗಳಿಗೂ ಇದೇ ರೀತಿ ಇದೆ.ಸರಿಯಾಗಿ ವರ್ತಿಸದ  ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಮುಖ್ಯ ನ್ಯಾಯಾಧೀಶ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಹೇಳಿದರು.

ಮುದ್ರಣ ಮಾಧ್ಯಮಗಳಿಗೆ  ಸೆನ್ಸಾರ್ ಇದೆ. ರಾಜ್ಯಸರ್ಕಾರದಿಂದ ಕೆಲವೊಂದು ನಿಯಂತ್ರಣವಿದೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳಿಗೆ ಇಂತಹ ಸೆನ್ಸಾರ್ ಕಾಣುತ್ತಿಲ್ಲ ಎಂದು  ನ್ಯಾಯಾಲಯ ಹೇಳಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಮಾಧ್ಯಮಗಳ ಸ್ವಾತಂತ್ರದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದಂತೆ  ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದೆ ಮತ್ತು ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಹೊಂದಲು ಪತ್ರಿಕಾ ಮಾಧ್ಯಮಗಳನ್ನು ಪ್ರೋತ್ಸಾಹಿಸಬೇಕು ಎಂದು ವಾದಿಸಿದರು. 

ಆದರೆ, ಸಿಂಗ್ ಉಲ್ಲೇಖಿಸಿದ ಹೇಳಿಕೆಗಳು ಹಳೆಯವು ಎಂದು ಗಮನಿಸಿದ ನ್ಯಾಯಾಲಯ, ಇದೀಗ ಸ್ವಾತಂತ್ರ್ಯವನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿತು. ವಾಕ್ ಸ್ವಾತಂತ್ರ್ಯವನ್ನು ಹೆಚ್ಚು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಭಾರತದ ಮುಖ್ಯ ನ್ಯಾಯಮೂರ್ತಿಗಳ ಇತ್ತೀಚಿನ ಹೇಳಿಕೆಯನ್ನು ನ್ಯಾಯಪೀಠ ಉಲ್ಲೇಖಿಸಿತು.

SCROLL FOR NEXT