ದೇಶ

2016ರ ನೋಟು ನಿಷೇಧದ ಪರಿಣಾಮವನ್ನು 2020ರಲ್ಲಿ ದೇಶದ ಜಿಡಿಪಿ ಕುಸಿತ ಮೂಲಕ ನೋಡಬಹುದು:ರಾಹುಲ್ ಗಾಂಧಿ

Sumana Upadhyaya

ನವದೆಹಲಿ: 2016ರಲ್ಲಿ ನೋಟು ಅನಾಣ್ಯೀಕರಣಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಧಾರದ ಬಗ್ಗೆ ಹೊಸ ವಿಡಿಯೊ ಮೂಲಕ ಮತ್ತೆ ಟೀಕಿಸಿರುವ ರಾಹುಲ್ ಗಾಂಧಿ, ಇದರಿಂದ ದೇಶದ ಜಿಡಿಪಿ ಹೇಗೆ ದುಸ್ಥಿತಿಗೆ ಹೋಯಿತು ಎಂಬುದನ್ನು ತಿಳಿಸಿದ್ದಾರೆ.

ಈ ದೇಶದ ಬಡವರು, ರೈತರು, ಅಸಂಘಟಿತ ವಲಯಗಳ ಮೇಲೆ ದಾಳಿ ನಡೆಸುವ ಕೇಂದ್ರ ಸರ್ಕಾರದ ವಿರುದ್ಧ ಎಲ್ಲರೂ ಒಟ್ಟಾಗಿ ನಿಂತು ಹೋರಾಟ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪಿಎಂ ಮೋದಿಯವರ ನಗದುರಹಿತ ವಹಿವಾಟು ಎಂದರೆ ನಿಜವಾಗಿಯೂ ಅವರ ಅರ್ಥದಲ್ಲಿ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ. 2016ರ ನವೆಂಬರ್ 8ರ ನೋಟು ಅನಾಣ್ಯೀಕರಣದ ಪರಿಣಾಮ ಏನು ಎಂಬುದು ಆಗಸ್ಟ್ 31, 2020ಕ್ಕೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಜೂನ್ 30ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕಳೆದ 40 ವರ್ಷಗಳಲ್ಲಿ ಶೇಕಡಾ 23.9ರಷ್ಟು ಕುಸಿದಿದೆ ಎಂದು ಸರ್ಕಾರದ ಅಂಕಿಅಂಶಗಳೇ ಹೇಳುತ್ತದೆ ಎಂದಿದ್ದಾರೆ.

ಮತ್ತೊಂದು ವಿಡಿಯೊದಲ್ಲಿ ರಾಹುಲ್ ಗಾಂಧಿ, ದೇಶದ ಆರ್ಥಿಕತೆಯನ್ನು ಮೋದಿಯವರು ಹೇಗೆ ನಾಶ ಮಾಡಿದ್ದಾರೆ, ನೋಟು ನಿಷೇಧದ ಹಿಂದಿನ ಅವರ ರಾಜಕೀಯ ಉದ್ದೇಶಗಳೇನಾಗಿದ್ದವು, ಕಾರ್ಪೊರೇಟ್ ವಲಯಗಳ ಉದ್ಯಮಿಗಳ ಸಾಲವನ್ನು ಮನ್ನಾ ಮಾಡಲು ಅಸಂಘಟಿತ ವಲಯದ ಜನರ ಹಣವನ್ನು ಮೋದಿ ಕಿತ್ತುಕೊಂಡರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

SCROLL FOR NEXT